ಲಂಚ ಸ್ವೀಕರಿಸುವಾಗ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಲೆಡ್ಜರ್​ ಕೀಪರ್​ ಎಸಿಬಿ ಬಲೆಗೆ

Bribe
Published on

ಶಿವಮೊಗ್ಗ: ಲಂಚ ಸ್ವೀಕರಿಸುವಾಗ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಲೆಡ್ಜರ್​ ಕೀಪರ್​ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸುನೀತಾ ಎಸಿಬಿ ಬಲೆಗೆ ಬಿದ್ದವರು. ಶಿಕಾರಿಪುರ ತಾಲೂಕು ಬಗಣಕಟ್ಟೆ ಗ್ರಾಮದ ಮಲ್ಲೇಶಪ್ಪ ಅವರಿಂದ ಒಂದು ಸಾವಿರ ರೂಪಾಯಿ ಲಂಚ ಪಡೆಯುವಾಗ ಪ್ರತ್ಯಕ್ಷವಾಗಿ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಸ್ವ ಉದ್ಯೋಗ ಯೋಜನೆಯಡಿ ಮಲ್ಲೇಶಪ್ಪ ಅವರಿಗೆ ಒಂದು ಲಕ್ಷ ರೂಪಾಯಿ ಸಾಲ‌ ಮಂಜೂರಾಗಿತ್ತು. ಮಲ್ಲೇಶಪ್ಪ ಅವರ ಫೈಲ್‌ ಮೇಲಧಿಕಾರಿಗಳಿಗೆ ಕಳುಹಿಸಲು ಒಂದು ಸಾವಿರ ರೂಪಾಯಿ ಲಂಚ ಕೇಳಿದ್ದ ಸುನೀತಾ. ಇಂದು ಸಂಜೆ ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿದ ಎಸಿಬಿ ಹಣದ ಸಮೇತ ಸುನಿತಾರನ್ನು ವಶಕ್ಕೆ‌ ಪಡೆದಿದ್ದಾರೆ.

ದೂರಿನ ಆಧಾರದ ಮೇಲೆ ಎಸಿಬಿ ಡಿವೈಎಸ್​ಪಿ ಲೊಕೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net