ಅಕ್ಷರ್​​​ಗೆ ಬಡ್ತಿ ರಾಹುಲ್​ಗಿಂತ ಹಿಂಬಡ್ತಿ: ಆಕ್ರೋಶ ಹೊರಹಾಕಿದ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ! ICC Champions Trophy

ICC Champions Trophy

ICC Champions Trophy : ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್ ಪಂದ್ಯದಿಂದ ಕಳಪೆ ಫಾರ್ಮ್​ನಿಂದ ಹೊರಗುಳಿದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ, ನಂತರದ ರಣಜಿ ಟ್ರೋಫಿ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ರೋಹಿತ್ ತಮ್ಮ ಫಾರ್ಮ್ ಮರಳಿ ಪಡೆಯುವುದು ಬಹಳ ಮುಖ್ಯವಾಗಿತ್ತು.

ಸತತ ಹತ್ತು ಇನ್ನಿಂಗ್ಸ್‌ಗಳಲ್ಲಿ (ಒಂಬತ್ತು ಟೆಸ್ಟ್‌ಗಳು, ಒಂದು ಏಕದಿನ) ರನ್ ಗಳಿಸಲು ವಿಫಲವಾದ ನಂತರ, ರೋಹಿತ್ ಅಂತಿಮವಾಗಿ ತಮ್ಮ ಹಿಂದಿನ ಫಾರ್ಮ್ ಅನ್ನು ಪ್ರದರ್ಶಿಸಿದರು. ಭಾನುವಾರ ಕಟಕ್‌ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸರಣಿ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. 12 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳೊಂದಿಗೆ ತಮ್ಮ 32ನೇ ಏಕದಿನ ಶತಕವನ್ನು ಗಳಿಸಿದರು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ ವಿಜಯ ಸಾಧಿಸಲು ನೆರವಾದರು.

ರೋಹಿತ್ ಈಗ ಆರಂಭಿಕನಾಗಿ ಭಾರತಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಎರಡನೇ ಸ್ಥಾನವನ್ನು ತಲುಪಿದ್ದಾರೆ. ರೋಹಿತ್ ಎಲ್ಲ ಸ್ವರೂಪಗಳಲ್ಲಿ ಆರಂಭಿಕನಾಗಿ 15,404 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ 15,335 ರನ್‌ಗಳ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ವೀರೇಂದ್ರ ಸೆಹ್ವಾಗ್ 15,758 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಫಾರ್ಮ್‌ಗೆ ಮರಳಿರುವುದು ಭಾರತೀಯ ತಂಡದ ಆಡಳಿತ ಮಂಡಳಿಗೆ ದೊಡ್ಡ ತಲೆನೋವಿನಿಂದ ಮುಕ್ತಿ ಸಿಕ್ಕಂತಾಗಿದೆ.

ಇದನ್ನೂ ಓದಿ: ಇನ್ನೇನು ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ! Snake

ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದರೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತದ ಬ್ಯಾಟಿಂಗ್ ಹಳಿಗೆ ಬರಲಿದೆ. ಅಲ್ಲಿಗೆ ಟೀಮ್​ ಇಂಡಿಯಾ ಚಾಂಪಿಯನ್ಸ್​ ಟ್ರೋಫಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಲಿದೆ.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳು

ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿನ ಬದಲಾವಣೆಗಳ ಬಗ್ಗೆ ಹಲವಾರು ಮಾಜಿ ಆಟಗಾರರು ಟೀಕಿಸಿದ್ದಾರೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್​ಗೂ ಮುಂಚೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಬ್ಯಾಟಿಂಗ್​ಗೆ ಕಳುಹಿಸಿದ್ದಕ್ಕೆ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಎಲ್ ರಾಹುಲ್​ಗೂ ಮುಂಚೆ ಮತ್ತೆ ಅಕ್ಷರ್ ಪಟೇಲ್ ಬ್ಯಾಟಿಂಗ್ ಮಾಡಲು ಬರುತ್ತಿರುವುದು ಏಕೆ? ನನಗಂತೂ ಮಾತು ಬರುತ್ತಿಲ್ಲ. ರಾಹುಲ್​ನಂತಹ ನುರಿತ ಬ್ಯಾಟ್ಸ್​ಮನ್​ನನ್ನು ಆರನೇ ಸ್ಥಾನಕ್ಕೆ ತಳ್ಳುವುದು ತುಂಬಾ ಕೆಟ್ಟದು. ರಾಹುಲ್​ಗಿಂತ ಮೊದಲು ಅಕ್ಷರ್​ನನ್ನು ಬ್ಯಾಟಿಂಗ್​ಗೆ ಕಳುಹಿಸುವುದು ಇಂತಹ ಪಿಚ್​ನಲ್ಲಿ ಸರಿಯಾದ ನಿರ್ಧಾರವಲ್ಲ ಎಂದು ಕೋಚ್​ ಗೌತಮ್​ ಗಂಭೀರ್​ ಮತ್ತು ನಾಯಕ ರೋಹಿತ್​ ಶರ್ಮ ನಿರ್ಧಾರವನ್ನು ದೊಡ್ಡ ಗಣೇಶ್ ಟೀಕಿಸಿದ್ದಾರೆ. (ಏಜೆನ್ಸೀಸ್​)

ಚಳಿಗಾಲದಲ್ಲಿ ನೀವು ಹೆಚ್ಚು ನಿದ್ರೆ ಮಾಡುವುದು ಏಕೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಉತ್ತರ… Sleep

ಅವಹೇಳನಕಾರಿ ಪೋಸ್ಟ್​: ಮೈಸೂರಿನಲ್ಲಿ ಡಿಜೆಹಳ್ಳಿ, ಕೆಜಿ ಹಳ್ಳಿ ರೀತಿಯಲ್ಲೇ ದಾಳಿ, ಡಿಸಿಪಿ ವಾಹನಕ್ಕೆ ಕಲ್ಲು ತೂರಾಟ! Mysuru Riot

Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…