ಪಾಂಡ್ಯ ಸಹೋದರರು ಮುಂಬೈನಲ್ಲಿ ಖರೀದಿಸಿದ ಮನೆಯ ಮೊತ್ತವೆಷ್ಟು ಗೊತ್ತಾ?

pandya brothers home for web
Published on

ಮುಂಬೈ: ಭಾರತ ನಿಗದಿತ ಓವರ್‌ಗಳ ತಂಡದ ಸದಸ್ಯರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಸಹೋದರರು ಬರೋಬ್ಬರಿ 30 ಕೋಟಿ ರೂಪಾಯಿಗೆ ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಮನೆ ಖರೀದಿಸದ್ದಾರೆ. ಬಾಲಿವುಡ್‌ನ ಸ್ಟಾರ್‌ಗಳಾದ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಪಾಂಡ್ಯ ಸಹೋದರರ ನೆರೆಮನೆಯವರಾಗಿದ್ದಾರೆ. ಮುಂಬೈನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಬಾಂದ್ರಾ ಉಪನಗರದಲ್ಲಿ ಪಾಂಡ್ಯ ಸಹೋದರರು ಮನೆ ಖರೀದಿಸಿದ್ದಾರೆ. ಹೈಟೆಕ್ ಸೌಕರ್ಯ ಹೊಂದಿರುವ ನಿವಾಸ ಇದ್ದಾಗಿದೆ. ಅಲ್ಲದೆ, ಮುಂಬೈ ನಗರ ಹಾಗೂ ಅರೆಬಿಯನ್ ಸಮುದ್ರದ ವಿಹಂಗಮ ನೋಟವನ್ನು ಮನೆಯಿಂದ ನೋಡಬಹುದು.

ಮನೆಯ ಆವರಣದಲ್ಲಿ ಸಾಹಸಿಕ ಕ್ರೀಡೆಯಾದ ರಾಕ್ ಕ್ಲೈಬಿಂಗ್, ಡೆಕ್ ಖಾಸಗಿ ಚಿತ್ರಮಂದಿರ, ಸ್ಕೈ ಲಾಂಜ್, ಈಜುಕೊಳ ಒಳಗೊಂಡಿದೆ. ಜತೆಗೆ ಗೇಮ್ ರೂಮ್, ಜಿಮ್, ಪೊಡೀಯಂ ಹಾಗೂ ಸ್ಪಾ ಒಳಗೊಂಡಿದೆ. ಪಾಂಡ್ಯ ಸಹೋದರರ ಇತ್ತೀಚೆಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಶಿಖರ್ ಧವನ್ ಸಾರಥ್ಯದ ಭಾರತ ನಿಗದಿತ ಓವರ್‌ಗಳ ತಂಡದ ಸದಸ್ಯರಾಗಿದ್ದರು. ಏಕದಿನ ಸರಣಿಯಲ್ಲಿ ಭಾರತ 2-1 ರಿಂದ ಗೆದ್ದರೆ, ಟಿ20 ಸರಣಿಯನ್ನು 1-2 ರಿಂದ ಸೋತಿತ್ತು. ಕೃನಾಲ್ ಪಾಂಡ್ಯಗೆ ಕೋವಿಡ್-19 ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾರ್ದಿಕ್ ಸೇರಿದಂತೆ 8 ಆಟಗಾರರು ಕಡೇ 2 ಟಿ20 ಪಂದ್ಯಗಳಿಂದ ಹೊರಗುಳಿದಿದ್ದರು. ಪಾಂಡ್ಯ ಸಹೋದರರು ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net