ಕೆಕೆಆರ್​ ಕೂಡಿಕೊಂಡ ಅಭಿಷೇಕ್​ ನಾಯರ್​! ಭಾರತ ತಂಡದಿಂದ ವಜಾಗೊಂಡ ಬೆನ್ನಲ್ಲೇ ಐಪಿಎಲ್​ಗೆ ಎಂಟ್ರಿ!

web abhi
Published on

ಕೋಲ್ಕತ: ಭಾರತ ತಂಡದ ಸಹಾಯಕ ಕೋಚ್​ ಹುದ್ದೆಯಿಂದ ವಜಾಗೊಂಡ ಬೆನ್ನಲ್ಲೇ ಅಭಿಷೇಕ್​ ನಾಯರ್​ ಐಪಿಎಲ್​ 18ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ ತಂಡದ ತರಬೇತಿ ಬಳಗವನ್ನು ಕೂಡಿಕೊಂಡಿದ್ದಾರೆ.

ಭಾರತ ತಂಡದ ಹುದ್ದೆಗೇರುವ ಮುನ್ನ ಕೆಕೆಆರ್​ ತಂಡದಲ್ಲೂ ಸಹಾಯಕ ಕೋಚ್​ ಆಗಿದ್ದ 41 ವರ್ಷದ ಅಭಿಷೇಕ್​, ಕಳೆದ ವರ್ಷದ ಪ್ರಶಸ್ತಿ ಗೆಲುವಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಶನಿವಾರ ಅಭಿಷೇಕ್​ ನಾಯರ್​ ತಂಡ ಕೂಡಿಕೊಂಡಿರುವುದನ್ನು ಕೆಕೆಆರ್​ ಸಾಮಾಜಿಕ ಜಾಲತಾಣದಲ್ಲಿ "ವೆಲ್​ಕಂ ಬ್ಯಾಕ್​ ಹೋಮ್​' ಎಂದು ಪ್ರಕಟಿಸಿದೆ. ಅವರು ಸಹಾಯಕ ಕೋಚ್​ ಪಾತ್ರದಲ್ಲೇ ಕೆಕೆಆರ್​ ತಂಡಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಭಾರತ ತಂಡದಿಂದ ಅಭಿಷೇಕ್​ ನಾಯರ್​ರನ್ನು ಕೈಬಿಟ್ಟಿರುವುದನ್ನು ಬಿಸಿಸಿಐ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net