More

    ವಿರಾಟ್​ ಕೊಹ್ಲಿ ಈ ರೀತಿ ಆಡಿದ್ರೆ ಆರ್​ಸಿಬಿ ಬಳಿ ಸೋಲು ಸುಳಿಯೋದೆ ಇಲ್ಲ: ಎಬಿ ಡಿವಿಲಿಯರ್ಸ್ ಮಹತ್ವದ​ ಸಲಹೆ

    ನವದೆಹಲಿ: ಇದುವರೆಗೂ 16 ಐಪಿಎಲ್​ ಸೀಸನ್ ಆಡಿರುವ​ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟ್ರೋಫಿ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ. ಪ್ರಸಕ್ತ 17 ಸೀಸನ್​ ಮೇಲೆಯೂ ಅಭಿಮಾನಿಗಳಿಗೆ ನಿರೀಕ್ಷೆ ಇಲ್ಲ. ಏಕೆಂದರೆ, ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ ಆರ್​ಸಿಬಿ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ದಾಖಲಿಸಿದ್ದು, ತಂಡದ ಮೇಲೆ ಅಭಿಮಾನಿಗಳು ಭರವಸೆ ಕಳೆದುಕೊಂಡಿದ್ದಾರೆ.

    ಮೂರು ಪಂದ್ಯಗಳಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ ಆರ್​ಸಿಬಿ ಎಂಟನೇ ಸ್ಥಾನದಲ್ಲಿ ಮುಂದುವರಿದಿದೆ. ಇದರ ನಡುವೆ ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮಾತ್ರ ರನ್‌ಗಳ ಸುರಿಮಳೆ ಸುರಿಸುತ್ತಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 67.66 ಸರಾಸರಿಯಲ್ಲಿ 203 ರನ್ ಗಳಿಸಿದ್ದಾರೆ. ಸದ್ಯ ಕೊಹ್ಲಿ ಅವರು ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಆದರೂ ಆರ್​ಸಿಬಿ ಸತತ ಸೋಲು ಕಾಣುತ್ತಿದ್ದು, ಆರ್​ಸಿಬಿಯ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ತಂಡದ ಗೆಲುವಿಗೆ ಪ್ರಮುಖ ಸಲಹೆ ನೀಡಿದ್ದಾರೆ.

    ವಿರಾಟ್​ ಕೊಹ್ಲಿ 15ನೇ ಓವರ್​ವರೆಗೂ ಕ್ರೀಸ್​ನಲ್ಲಿ ಇರಲು ಡಿವಿಲಿಯರ್ಸ್​ ಬಯಸಿದ್ದಾರೆ. ಇದೇ ಸಮಯದಲ್ಲಿ, ನಾಯಕ ಫಾಫ್​ ಡುಪ್ಲೆಸಿಸ್ ಪವರ್ ಪ್ಲೇನಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಮತ್ತು ಹೆಚ್ಚು ಜವಾಬ್ದಾರಿಯುತವಾಗಿ ಆಡಲು ಎಬಿಡಿ ಸಲಹೆ ನೀಡಿದ್ದಾರೆ.

    ಈ ವಿಚಾರಗಳನ್ನು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಕೊಹ್ಲಿ ಅವರು ತಮ್ಮ ಉತ್ತಮ ಆರಂಭವನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸುವ ಅಗತ್ಯವಿದೆ. ಮಧ್ಯಮ ಓವರ್‌ಗಳಲ್ಲಿಯೂ ಅವರು ತಮ್ಮ ವೇಗವನ್ನು ಮುಂದುವರಿಸಬೇಕಾಗಿದೆ. ಡುಪ್ಲೆಸಿಸ್ ಪವರ್ ಪ್ಲೇನಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಕು ಮತ್ತು ಜವಾಬ್ದಾರಿಯುತವಾಗಿ ಆಡಬೇಕು. ಕೊಹ್ಲಿ ಆರು ಮತ್ತು 15 ಓವರ್‌ಗಳ ನಡುವೆ ಸ್ಫೋಟಕವಾಗಿ ಬ್ಯಾಟಿಂಗ್ ಮಾಡಬೇಕು. ಹೀಗಾದರೆ ಆರ್‌ಸಿಬಿ ದೊಡ್ಡ ಮೊತ್ತ ಗಳಿಸಲಿದೆ ಎಂದು ಎಬಿಡಿ ಹೇಳಿದರು.

    ಇನ್ನು ಆರ್​ಸಿಬಿ ಪ್ರಸಕ್ತ ಋತುವಿನಲ್ಲಿ ಕಳಪೆ ಆರಂಭವೇನೂ ಹೊಂದಿಲ್ಲ, ಇಡೀ ಸಮಸ್ಯೆ ಪಂದ್ಯದ ಮಧ್ಯ ಭಾಗದಲ್ಲಿದೆ. 6 ರಿಂದ 15 ಓವರ್​ಗಳ ಅಂತರದಲ್ಲಿ ಸ್ಫೋಟಕವಾಗಿ ಆಡುವ ಅವಶ್ಯಕತೆ ಇದೆ. ಆರ್‌ಸಿಬಿಗೆ ಸದ್ಯ ಗೆಲುವಿನ ಅವಶ್ಯಕತೆ ಇದೆ. ಒಂದೆರೆಡು ಗೆಲುವು ಸಿಕ್ಕರೆ ಗೆಲುವಿನ ಹಾದಿ ತುಳಿಯುವುದು ಕಷ್ಟವೇನಲ್ಲ ಎಂದು ಡಿವಿಲಿಯರ್ಸ್ ಹೇಳಿದರು.

    ಅಂದಹಾಗೆ ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಜೈಪುರ ವೇದಿಕೆಯಾಗಲಿದೆ.

    ಎಬಿ ಡಿವಿಲಿಯರ್ಸ್ ಅವರು 2011 ರಿಂದ 2021ರ ನಡುವೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದರು. ಅವರು 157 ಪಂದ್ಯಗಳಲ್ಲಿ 41.10 ರ ಸರಾಸರಿಯಲ್ಲಿ 4,522 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 158. ಎರಡು ಶತಕಗಳು ಮತ್ತು 37 ಅರ್ಧಶತಕಗಳು ಅವರ ಹೆಸರಿನಲ್ಲಿವೆ. (ಏಜೆನ್ಸೀಸ್​)

    ಕೇರಳಿಗರು ಕಾಮದಲ್ಲಿ… ರೀಲ್ಸ್​ನಿಂದಲೇ ಸಿನಿಮಾ ಅವಕಾಶ ಗಿಟ್ಟಿಸಿದ ಮಲಯಾಳಿ ಯುವತಿಯ ಶಾಕಿಂಗ್ ಹೇಳಿಕೆ!

    ವಿಚ್ಛೇದಿತ ನಿರ್ಮಾಪಕನ ಜತೆ ಮದುವೆ: ಸೌತ್​ ಬ್ಯೂಟಿ ಅಂಜಲಿ ಶಾಕಿಂಗ್​ ಕಾಮೆಂಟ್​ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts