ಪ್ರಕೃತಿ ಆರಾಧನೆಯೊಂದಿಗೆ ಬೆಸೆದುಕೊಂಡ ಜೀವನ: ಸುಧಾ ನಾಗೇಶ್ ವಿಶ್ಲೇಷಣೆ

aati
Published on

ಬಂಟ್ವಾಳ: ತುಳುವರ ಜೀವನ ಪದ್ಧತಿ ಇಲ್ಲಿನ ದೈವಗಳ ಮತ್ತು ಪ್ರಕೃತಿಯ ಆರಾಧನೆಯೊಂದಿಗೆ ಬೆಸೆದುಕೊಂಡಿದ್ದು, ಈ ಸಂಸ್ಕೃತಿಯ ಮಹತ್ವ ಅರಿತು ಮುಂದಿನ ಪೀಳಿಗೆಗೂ ತಿಳಿಸಿಕೊಡಬೇಕು ಎಂದು ತುಳು ಅಕಾಡೆಮಿ ಮಾಜಿ ಸದಸ್ಯೆ, ಶಿಕ್ಷಕಿ ಸುಧಾ ನಾಗೇಶ್ ಹೇಳಿದರು.

ಸ.ಪ.ಪೂ. ಕಾಲೇಜು ಬಿ.ಮೂಡದ ಎನ್ನೆಸ್ಸೆಸ್ ಘಟಕದ ವತಿಯಿಂದ ಆಯೋಜಿಸಲಾದ ಆಟಿದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯ ಮಠ ವಿವಿಧ ಶೈಕ್ಷಣಿಕ ಸಂಘ ಉದ್ಘಾಟಿಸಿದರು. ಅಭಿವೃದ್ಧಿ ಸಮಿತಿ ಸದಸ್ಯ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಚೆನ್ನೆಮನೆ ಆಡಿ ಚಾಲನೆ ನೀಡಿದರು.

ಪ್ರಾಂಶುಪಾಲ ಯೂಸುಫ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ದಾಮೋದರ್, ಅಬ್ದುಲ್ ರಝಾಕ್, ಲವೀನಾ ಶಾಂತಿ ಲೋಬೋ, ಲಕ್ಷ್ಮೀ ಆಚಾರ್ಯ, ಸೂರಜ್ ಬಿ.ಎಸ್, ಇರ್ಷಾದ್, ರಾಧಾ, ಶಮಿತಾ, ಸವಿತಾ, ದಿವ್ಯಾ, ಹರ್ಷಿತ, ಜಯಲೀಲಾ ಉಪಸ್ಥಿತರಿದ್ದರು.

ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ ಕೆ. ಪ್ರಾಸ್ತಾಪಿಸಿದರು. ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ತುಳುನಾಡಿನ ಹಾಡು, ಒಗಟು, ಗಾದೆಮಾತು, ಜನಪದ ಹಾಡುಗಳ ಮೂಲಕ ಮನರಂಜನೆ ನೀಡಿದರು. ವಿದ್ಯಾರ್ಥಿನಿ ಅರ್ಪಿತ ಸ್ವಾಗತಿಸಿದರು. ಘಟಕದ ನಾಯಕ ಅಕ್ಷಿತ್ ವಂದಿಸಿದರು. ವಿದ್ಯಾರ್ಥಿಗಳಾದ ನಿರೀಕ್ಷಾ ಮತ್ತು ವರ್ಣಿತಾ ನಿರೂಪಿಸಿದರು. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ತಯಾರಿಸಿ ತಂದಿದ್ದ ತುಳುನಾಡಿನ ವಿವಿಧ ಖಾದ್ಯಗಳನ್ನು ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net