

ವಿಟ್ಲ: ಅಳಿಸಿ ಹೋಗದ ರೀತಿಯಲ್ಲಿ ವಿದ್ಯುತ್ ಬಿಲ್ ನೀಡಬೇಕು. ಮಾನ್ಸೂನ್ ಕಾರ್ಯಪಡೆ ಹಾಗೂ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿ ನೇಮಕ ಮಾಡಬೇಕು. ಕಿಲೋವ್ಯಾಟ್ ಹೆಚ್ಚೆಂದು ದಂಡನೆ ವಿಽಸುವುದನ್ನು ತಕ್ಷಣ ನಿಲ್ಲಿಸಬೇಕು. ಮನೆಯ ಸಂಪರ್ಕದಿಂದ ವಾಣಿಜ್ಯ ಬಳಕೆಗೆ ವಿದ್ಯುತ್ ಅಕ್ರಮವಾಗಿ ಪಡೆದುಕೊಂಡ ಬಗ್ಗೆ ದೂರು ನೀಡಿದರೂ ಕ್ರಮವಿಲ್ಲ. ರಾತ್ರಿ ವಿದ್ಯುತ್ ಹೋದರೆ ದುರಸ್ತಿ ಮಾಡಲು ಸಿಬ್ಬಂದಿ ಕೊರತೆ ಇದೆ.
ಇವು ಬುಧವಾರ ಪಂಚಲಿಂಗೇಶ್ವರ ದೇವಸ್ಥಾನ ಸಭಾಭವನದಲ್ಲಿ ಮೆಸ್ಕಾಂ ವಿಟ್ಲ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರಿಂದ ಕೇಳಿ ಬಂದ ಬೇಡಿಕೆಗಳು.
ಪಟ್ಟಣ ಪಂಚಾಯಿತಿ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಟೌನ್ ಫೀಡರ್ನಿಂದ ಬೇರೆ ಕಡೆಗೆ ಸಂಪರ್ಕ ನೀಡಿರುವುದರಿಂದ, ಪೇಟೆಯಲ್ಲಿ ನಿರಂತರ ವಿದ್ಯುತ್ ಕಡಿತವಾಗುತ್ತಿದೆ. ತೋಟದೊಳಗೆ ತಂತಿ ತುಂಡಾಗಿ ಬೀಳುತ್ತಿದೆ ಎಂದು ಹೇಳಿದರು.
ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಜೆಜೆಎಂ ಕಾಮಗಾರಿಗೆ ವಿದ್ಯುತ್ ಸಂಪರ್ಕ ತ್ವರಿತವಾಗಿ ಕಲ್ಪಿಸಲಾಗುತ್ತಿಲ್ಲ. ಕುಡಿಯುವ ನೀರಿನ ಪಂಪ್ಸೆಟ್ಗಳಿಗೆ ಕಿಲೋವ್ಯಾಟ್ ಹೆಚ್ಚು ಆಗುತ್ತಿದೆ ಎಂದು ದಂಡ ವಿಽಸುವುದು ಸರಿಯಲ್ಲ. ಪಂಚಾಯಿತಿ ನಿರ್ಣಯಕ್ಕೆ ಉತ್ತರ ನೀಡಿಲ್ಲ. ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆಧಾರ್ ಲಿಂಕ್ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಹೆಸರು ಬದಲಾವಣೆ ವಿಚಾರದಲ್ಲಿ ರೈತರಿಂದ ಸುಲಿಗೆ ಮಾಡುವುದನ್ನು ನಿಲ್ಲಿಸಬೇಕು ಎಂದರು. ರಾಮಣ್ಣ ಪಾಳಿಗೆ ಮಾತನಾಡಿ ಕುದ್ದುಪದವು ಸಬ್ಸ್ಟೇಷನ್ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರೂ ಕೆಲಸ ನಡೆಯುತ್ತಿಲ್ಲ. ಯುಜಿ ಕೇಬಲ್ ಬೇಡಿಕೆಯನ್ನು ಹಲವು ವರ್ಷಗಳಿಂದ ಕೇಳಿಕೊಂಡು ಬರಲಾಗುತ್ತಿದೆ ಎಂದರು. ಪರಶುರಾಮ ಕನ್ಯಾ ಈಗ ನೀಡುತ್ತಿರುವ ವಿದ್ಯುತ್ ಬಿಲ್ ಕೆಲವೇ ದಿನದಲ್ಲಿ ಅಳಿಸಿ ಹೋಗುತ್ತಿದ್ದು, ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಅಳಿಸಿ ಹೋಗದ ರೀತಿಯ ಬಿಲ್ ನೀಡಲು ಇಲಾಖೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಹಕರು ಕೇಳಿದ ಪ್ರಶ್ನೆಗಳಿಗೆ ವೇದಿಕೆಯಲ್ಲಿ ಕೂತವರು ಮುಖ ಮುಖ ನೋಡುವುದು ಬಿಟ್ಟು ಸರಿಯಾದ ಉತ್ತರ ನೀಡುತ್ತಿಲ್ಲ. ಸರಿಯಾದ ಮಾಹಿತಿಯಿಲ್ಲದೆ ಬಂದು ಗ್ರಾಹಕರಿಗೆ ಪ್ರತಿ ಸಭೆಯಲ್ಲೂ ಒಂದೇ ಆಶ್ವಾಸನೆ ಕೊಟ್ಟು ಹೋಗದೆ, ಮುಂದಿನ ಸಭೆಯಲ್ಲಿ ಈಗ ಬಂದ ದೂರುಗಳು ಸರಿಯಾಗಿ ವ್ಯವಸ್ಥೆಯಾಗುವಂತೆ ನೋಡಬೇಕು ಎಂದು ಗ್ರಾಹಕರು ಆಗ್ರಹಿಸಿದರು.
ಮೆಸ್ಕಾಂ ಅಽಕ್ಷಕ ಇಂಜಿನಿಯರ್ ಕೃಷ್ಣರಾಜ್, ಬಂಟ್ವಾಳ ಉಪವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ವೆಂಕಟೇಶ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಲೀನಾ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋವಿಂದ ರಾಜ್, ಬೃಹತ್ ಕಾಮಗಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಚಿನ್, ಇಂಜಿನಿಯರ್ ವಿವೇಕಾನಂದ ಶೆಣೈ, ಸಹಾಯಕ ಲೆಕ್ಕಾಽಕಾರಿ ರೇವತಿ, ಸಹಾಯಕ ಇಂಜಿನಿಯರ್ ಶ್ರೀನಿವಾಸ್, ಕನ್ಯಾನ ಶಾಖಾಽಕಾರಿ ಸತೀಶ್, ಉಕ್ಕುಡ ಶಾಖಾಽಕಾರಿ ಆನಂದ, ಸಾಲೆತ್ತೂರು ಶಾಖಾಽಕಾರಿ ರಾಜೇಶ್, ವಿಟ್ಲ ಶಾಖಾಽಕಾರಿ ಯೋಗೀಶ್, ಕಿರಿಯ ಇಂಜಿನಿಯರ್ ನವೀನ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ವರದಿ ಬಿಗ್ ಇಂಪ್ಯಾಕ್ಟ್
ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಕಚೇರಿ ಸ್ಥಳಾಂತರ ವಿಚಾರ ಕೋಲಾಹಲ ಸೃಷ್ಟಿಸಿತು. ಬೆರಳೆಣಿಕೆಯ ಮಂದಿ ಕಚೇರಿಯನ್ನು ಚಂದಳಿಕೆಯ ಖಾಸಗಿ ಕಟ್ಟಕ್ಕೆ ವರ್ಗಾವಣೆ ಮಾಡಬೇಕೆಂದು ಕೇಳಿಕೊಂಡರೆ, ಈಗ ಇರುವಲ್ಲಿಂದ ಗ್ರಾಹಕರಿಗೆ ಅನುಕೂಲವಾಗುವ ಸ್ವಂತ ಕಟ್ಟಡಕ್ಕೆ ಹೋಗಬೇಕು ಹೊರತು ತೊಂದರೆಯಾಗುವ ಸ್ಥಳಕ್ಕೆ ಹೋಗುವುದು ಸರಿಯಲ್ಲ ಎಂದು ಸಭೆಯಲ್ಲಿದ್ದ ಎಲ್ಲರೂ ಆಕ್ಷೇಪ ವ್ಯಕ್ತ ಪಡಿಸಿದರು. ಜನರ ಒತ್ತಡಕ್ಕೆ ಮಣಿದ ಅಽಕ್ಷಕರು ಗ್ರಾಹಕರ ಬೇಡಿಕೆಯಂತೆ ಮೆಸ್ಕಾಂ ಕಚೇರಿಯನ್ನು ವರ್ಗಾವಣೆ ಮಾಡುವ ವಿಚಾರವನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದು ತಿಳಿಸಿದರು. ಈ ಮೂಲಕ ವಿಜಯವಾಣಿಯ ವರದಿ ಬಿಗ್ ಇಂಪ್ಯಾಕ್ಟ್ ಆಗಿದೆ. ಎರಡು ವರ್ಷದಿಂದ ಅಜ್ಜಿನಡ್ಕ ಶಾಲೆಯ ಆವರಣದಿಂದ ವಿದ್ಯುತ್ ತಂತಿಯನ್ನು ತೆರವು ಮಾಡಲಾಗದ ವಿಚಾರ ವರದಿಯಾಗುತ್ತಿದ್ದಂತೆ ಎರಡೇ ದಿನದಲ್ಲಿ ತೆರವು ಮಾಡಲಾಗಿದೆ. ಇದಕ್ಕೆ ವಿಜಯವಾಣಿ ಹಾಗೂ ಮೆಸ್ಕಾಂ ಹಿರಿಯ ಅಽಕಾರಿಗಳಿಗೆ ನಾಗರಿಕ ಹಿತರಕ್ಷಣಾ ವೇದಿಕೆಯ ವೆಂಕಟರಮಣ ಪುಣಚ ಅಭಿನಂದನೆ ಸಲ್ಲಿಸಿದರು.
ಕೃಷಿ ಪಂಪ್ಸೆಟ್ ಹೆಸರು ಬದಲಾವಣೆಗೆ ಛಾಪಾ ಕಾಗದ ನೀಡುವ ಅಗತ್ಯವಿಲ್ಲ. ಜಾಗ ಸ್ವಾಽನಕ್ಕೆ ಬಂದ ವಿಚಾರದ ದಾಖಲೆಯ ಜತೆಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿದರೆ ಅದನ್ನು ಮಾಡಿಕೊಡಲಾಗುವುದು. ಗೃಹ ಬಳಕೆ ವಿದ್ಯುತ್ ಸಂಪರ್ಕದ ಹೆಸರು ಬದಲಾವಣೆಗೆ ೫೦೦ ರೂ.ಛಾಪಾ ಕಾಗದದ ಮೂಲಕ ಅರ್ಜಿ ಸಲ್ಲಿಸಬೇಕು. ವಿದ್ಯುತ್ ಸಂಪರ್ಕ ಪಡೆಯಲು ಪಂಚಾಯಿತಿ ಎನ್ಒಸಿ ಅಗತ್ಯವಿಲ್ಲ. ಜನರಿಗೆ ಸ್ಪಂದನೆಯನ್ನು ನೀಡುವ ಕೆಲಸವನ್ನು ಇಲಾಖೆ ನಿರಂತರವಾಗಿ ಮಾಡುತ್ತದೆ. ಸಮಸ್ಯೆಗಳಿಗೆ ತಳಮಟ್ಟದಲ್ಲಿ ವ್ಯವಸ್ಥೆಯಾಗದೆ ಹೋದರೆ, ಮೇಲ್ಮಟ್ಟದವರೆಗೂ ತರಬಹುದು.
| ಕೃಷ್ಣರಾಜ್
ಮೆಸ್ಕಾಂ ಅಽಕ್ಷಕ ಇಂಜಿನಿಯರ್