More

    ಆಮೀರ್​ ಖಾನ್​ ಪುತ್ರ ಬಾಲಿವುಡ್​ಗೆ ಎಂಟ್ರಿ; ಸೌತ್​ನ ಈ ಚಿತ್ರದ ರಿಮೇಕ್​ನಲ್ಲಿ ನಟನೆ

    ಮುಂಬೈ: ಬಾಲಿವುಡ್​ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಆಮೀರ್ ಖಾನ್​ ಸದ್ಯ ಲಾಲ್​ ಸಿಂಗ್​ ಛಡ್ಡಾ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಇದೀಗ ಆಮೀರ್​ ಪುತ್ರನ ಸಿನಿಮಾ ವಿಚಾರವೊಂದು ಸದ್ದು ಮಾಡುತ್ತಿದೆ. ಅಂದರೆ, ಜುನೈದ್​ ಖಾನ್​ ಬಾಲಿವುಡ್​ಗೆ ಆಗಮಿಸುವ ತಯಾರಿ ನಡೆಸಿದ್ದಾರೆ.

    ಇದನ್ನೂ ಓದಿ: ಅಕ್ಷಯ್ ಕುಮಾರ್ ಲಕ್ಷ್ಮೀ ಬಾಂಬ್​ ಚಿತ್ರಕ್ಕೆ ಬ್ಯಾನ್​ ಬಿಸಿ; ಲಕ್ಷ್ಮೀ ದೇವಿಗೆ ಅವಹೇಳನ ಆರೋಪ

    ಈಗಾಗಲೇ ವಿದೇಶದಲ್ಲಿ ನಟನೆಯ ಪಾಠ ಕಲಿತು ಬಂದಿರುವ ಜುನೈದ್​, ದಕ್ಷಿಣ ಭಾರತದ ಹಿಟ್ ಸಿನಿಮಾವೊಂದನ್ನು ಆಯ್ದುಕೊಂಡಿದ್ದಾರೆ. ಆ ಚಿತ್ರದ ರಿಮೇಕ್​ನಲ್ಲಿ ನಟಿಸಲಿದ್ದಾರೆ. ಮಲಯಾಳಂನಲ್ಲಿ ಕಳೆದ ವರ್ಷ ತೆರೆಕಂಡು ಹಿಟ್​ ಪಟ್ಟಿ ಸೇರಿದ್ದ ಇಶ್ಕ್​ ಚಿತ್ರದ ರಿಮೇಕ್​ನಲ್ಲಿ ನಟಿಸುವುದು ಅಧಿಕೃತವಾಗಿದೆ.

    ಮೂಲ ಮಲಯಾಳಂನ ಇಶ್ಕ್​ ಚಿತ್ರವನ್ನು ಅನುರಾಜ್​ ಮನೋಹರ್ ನಿರ್ದೇಶನ ಮಾಡಿದ್ದರು. ನಾಯಕನಾಗಿ ಶೇನ್​ ನಿಗಮ್​, ಅನ್​ ಶೀತಲ್​ ನಾಯಕಿಯಾಗಿ ನಟಿಸಿದ್ದರು. ಹಿಂದಿಯಲ್ಲಿ ನಿರ್ದೇಶನ ಯಾರು ಮಾಡಲಿದ್ದಾರೆ? ನಾಯಕಿ ಯಾರು, ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ವಿಚಾರ ಇನ್ನಷ್ಟೇ ಬಹಿರಂಗವಾಗಬೇಕಿದೆ.

    ಇದನ್ನೂ ಓದಿ: ಸಂತೋಷ್​ ಚಿತ್ರಮಂದಿರಕ್ಕೆ ಧ್ರುವ ಬರ್ತಾರಂತೆ … ಯಾಕಿರಬಹುದು?

    ಅಮೆರಿಕಾದ ಲಾಸ್​ ಏಂಜಲಸ್​ನಲ್ಲಿರುವ ಅಮೆರಿಕನ್​ ಅಕಾಡೆಮಿ ಆಫ್​ ಡ್ರಾಮಿಟಿಕ್ ಆರ್ಟ್ಸ್​ನಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಎ ಫಾರ್ಮಿಂಗ್​ ಸ್ಟೋರಿ, ಎ ಫಿವ್​ ಗುಡ್ ಮೆನ್​ಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್​ಗೆ ಪದಾರ್ಪಣೆ ಮಾಡುವ ಖುಷಿಯಲ್ಲಿದ್ದಾರೆ. (ಏಜೆನ್ಸೀಸ್​)

    ಶ್ರೀಲಂಕನ್​ ತಮಿಳಿಗನಾಗಿ ಹುಟ್ಟಿದ್ದು ನನ್ನ ತಪ್ಪೇ?; ಬಯೋಪಿಕ್​ ಬಗ್ಗೆ ಮುತ್ತಯ್ಯ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts