ದೆಹಲಿ ಮಾದರಿಯಲ್ಲೇ ರಾಜ್ಯದಲ್ಲಿಯೂ ಆಟೋ ಚಾಲಕರಿಗೆ ಉಚಿತ ವಿಮೆ, ಮಕ್ಕಳಿಗೆ ಉಚಿತ ಕೋಚಿಂಗ್ ಸೌಲಭ್ಯ ಕಲ್ಪಿಸಲು ಆಮ್ ಆದ್ಮಿ ಪಕ್ಷ ಒತ್ತಾಯ.

WhatsApp Image 2024-12-17 at 9.48.45 AM
Published on

ಬೆಂಗಳೂರು: ದೆಹಲಿ ಸರ್ಕಾರ ಈಗಾಗಲೇ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದು ಸಾವರ್ಜನಿಕರಲ್ಲಿ ಮೆಚ್ಚುಗೆ ಪಡೆದಿದ್ದು, ಸದ್ಯ ಆಟೋ ಚಾಲಕರು ಮತ್ತು ಅವರ ಕುಟುಂಬಕ್ಕೆ ಅನುಕೂಲವಾಗುವಂತ ಕೆಲಸ ಮಾಡಿದೆ ಅದೇ ರೀತಿ ನಮ್ಮ ರಾಜ್ಯದ ಆಟೋ ಚಾಲಕರು ಮತ್ತು ಅವರ ಕುಟುಂಬಕ್ಕೆ ಅದೇ ಮಾದರಿಯಲ್ಲಿ ಯೋಜನೆಗಳನ್ನು ಕಲ್ಪಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.

ಪ್ರಸ್ತುತ ದೆಹಲಿ ಸರ್ಕಾರ ಆಟೋ ಚಾಲಕರಿಗೆ ಉಚಿತವಾಗಿ 10 ಲಕ್ಷ ರೂಗಳ ವಿಮೆ, 5 ಲಕ್ಷ ರೂಗಳ ಅಪಘಾತ ವಿಮೆ, ಆಟೋ ಚಾಲಕರ ಹೆಣ್ಣು ಮಕ್ಕಳ ಮದುವೆಗೆ 1 ಲಕ್ಷ ರೂಗಳ ಧನಸಹಾಯ,ಯೂನಿಫಾರಂ ಖರೀದಿಗಾಗಿ 2500 ರೂಪಾಯಿಗಳ ಧನಸಹಾಯ, ಚಾಲಕರುಗಳಿಗಾಗಿ ಸರ್ಕಾರದಿಂದಲೇ ಪ್ರತ್ಯೇಕ ಮೊಬೈಲ್ ಆ್ಯಪ್ ಹಾಗೂ ಆಟೋ ಚಾಲಕರುಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಚಿತ ಕೋಚಿಂಗ್ ವ್ಯವಸ್ಥೆ ಕಲ್ಪಿಸಿದೆ. ರಾಜ್ಯದಲ್ಲಿಯೂ ಕೂಡಲೇ ಈ ಸೌಲಭ್ಯಗಳನ್ನು ಜಾರಿಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಆಟೋ ಘಟಕದ ರಾಜ್ಯಾಧ್ಯಕ್ಷ ಅಯುಬ್ ಖಾನ್, ಪೀಸ್ ಆಟೋ ಸಂಘಟನೆ ಅಧ್ಯಕ್ಷ ರಘು ನಾರಾಯಣಗೌಡ ನಿಯೋಗ ಸಾರಿಗೆ ಮಂತ್ರಿ ರಾಮಲಿಂಗ ರೆಡ್ಡಿಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.

ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಎಲ್ಲ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಹಾಗೂ ಎಲ್ಲ ಸಂಘಟನೆಗಳ ಸಭೆಯನ್ನು ಆಯೋಜಿಸಿ ಜಾರಿಗೆ ತರುವಲ್ಲಿ ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net