

ನವಾಜುದ್ದೀನ್ ಸಿದ್ಧೀಕಿ ಡೈವೋರ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದೆ. ಮೊನ್ನೆಯಷ್ಟೇ ಸಿದ್ಧೀಕಿ ಪತ್ನಿ ಆಲಿಯಾ ಸಿದ್ಧೀಕಿ, ತಮ್ಮ ಪತಿಗೆ ವಾಟ್ಸಪ್ ಮೂಲಕ ಡೈವೋರ್ಸ್ ನೋಟೀಸ್ ಕೊಟ್ಟಿದ್ದರು. ನವಾಜುದ್ದೀನ್ ತಮಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದರಿಂದ ದೂರವಾಗುತ್ತಿರುವುದಾಗಿ ಆಲಿಯಾ ಹೇಳಿಕೊಂಡರೂ, ಆಕೆಗೆ ಬೇರೆಯವರ ಜತೆಗೆ ಏರ್ ಇತ್ತು ಎಂಬ ಕಾರಣಕ್ಕೆ ನವಾಜುದ್ದೀನ್ರಿಂದ ದೂರ ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.
ತಮ್ಮ ಮೇಲಿನ ಎಲ್ಲಾ ಆರೋಪಗಳಿಗೆ ಉತ್ತರ ಕೊಡುವುದಕ್ಕೆ ಆಲಿಯಾ ಇದೀಗ ದಾರಿ ಕಂಡುಕೊಂಡಿದ್ದಾರೆ. ಇದುವರೆಗೂ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದ ಅವರು, ಇದೀಗ ಟ್ವಿಟರ್ಗೆ ಬಂದಿದ್ದಾರೆ. ಬುಧವಾರ (ಮೇ 20) ಹೊಸ ಟ್ವಿಟರ್ ಅಕೌಂಟ್ ತೆರೆದಿರುವ ಆಲಿಯಾ, ಅಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ.
‘ನನ್ನ ಬಗ್ಗೆ ಕೆಲವು ಕಡೆ ಅಪಪ್ರಚಾರವಾಗುತ್ತಿದೆ. ಆ ಬಗ್ಗೆ ಉತ್ತರ ನೀಡಲು ನಾನು ಟ್ವಿಟರ್ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಬಗ್ಗೆ ಯಾವುದೇ ತಪ್ಪು ಮಾಹಿತಿ ಹರಡಬಾರದು ಎಂಬ ಕಾರಣಕ್ಕೆ ನಾನು ಹೀಗೆ ಮಾಡುತ್ತಿದ್ದೇನೆ. ಸತ್ಯಾಂಶವನ್ನು ಎಲ್ಲರಿಗೂ ತಲುಪಿಸಬೇಕೆಂದು ಹೀಗೆ ಮಾಡುತ್ತಿದ್ದೇನೆ’ ಎಂದು ಆಲಿಯಾ ಮೊದಲ ಟ್ವೀಟ್ ಮಾಡಿದ್ದಾರೆ.
ತಮ್ಮ ಎರಡನೆಯ ಟ್ವೀಟ್ನಲ್ಲಿ, ತಮಗೆ ಯಾವುದೇ ಏರ್ಗಳಿಲ್ಲ ಎಂದು ಹೇಳಿರುವ ಅವರು, ‘ಮೊದಲನೆಯದಾಗಿ ನನಗೆ ಯಾವುದೇ ಏರ್ಗಳಿಲ್ಲ. ಆ ತರಹ ಯಾರಾದರೂ ನನ್ನ ವಿರುದ್ಧ ಸುದ್ದಿ ಹಬ್ಬಿಸುತ್ತಿದ್ದರೆ ಅದು ಸುಳ್ಳು. ಮಾಧ್ಯಮದಲ್ಲಿ ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ನಿಜವಾದ ವಿಷಯವನ್ನು ಮರೆಮಾಚುವುದಕ್ಕೆ ಈ ರೀತಿ ಮಾಡಲಾಗುತ್ತಿದೆ’ ಎಂದು ಎರಡನೆಯ ಟ್ವೀಟ್ನಲ್ಲಿ ಹೇಳಿದ್ದಾರೆ.
‘ನನ್ನ ಮಕ್ಕಳಿಗೆ ನಾನು ಗಟ್ಟಿಯಾಗಿ ಮಾತನಾಡುವುದಕ್ಕೆ ಮುಂದಾಗಿದ್ದೇನೆ. ಇಲ್ಲಿಯವರೆಗೂ ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಅದಕ್ಕೇ ನನಗೆ ಯಾವುದೇ ಭಯವಿಲ್ಲ. ಆದರೆ, ಯಾರಾದರೂ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡುವುದಕ್ಕೆ ಮುಂದೆ ಬಂದರೆ ನನಗಿಷ್ಟವಾಗುವುದಿಲ್ಲ. ಹಣದಿಂದ ಸತ್ಯವನ್ನು ಕೊಂಡುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಅವರು ಹೇಳಿದ್ದಾರೆ.
ಆಲಿಯಾ ಅವರಿಗೆ ಹಲವರು ಸಾಂತ್ವನ ನೀಡುವುದರ ಜತೆಗೆ, ಧೈರ್ಯ ಹೇಳಿದ್ದಾರೆ.