

Hanged: ತಮ್ಮ ಪ್ರೀತಿಯನ್ನು ಮನೆಯರು ಒಪ್ಪಲಿಲ್ಲ ಎಂದು ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ವರಂಗಲ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ವರ್ಗಲ್ ಮಂಡಲದ ಅವುಸುಲೊನಿಪಲ್ಲಿ ಗ್ರಾಮದ ನಿವಾಸಿಗಳಾದ ಕಲ್ಪನಾ(18), ಶಿವಕುಮಾರ್(21) ಮೃತರು. ಕಲ್ಪನಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಶಿವಕುಮಾರ್ ಹಾಗೂ ಕಲ್ಪನಾ ಕೆಲ ದಿನಗಳಿಂದ ಪ್ರೀತಿಸುತ್ತಿದ್ದರು. ಇದು ಎರಡು ಮನೆಯರಿಗೆ ಗೊತ್ತಾಗಿದೆ. ಹೀಗಾಗಿ, ಮದುವೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಹಿರಿಯರು ನಿರಾಕರಿದ್ದಾರೆ. ಈ ಹಿನ್ನೆಲೆ ಶಿವಕುಮಾರ್ ತಮ್ಮ ಜಮೀನಲ್ಲಿನ ಮರವೊಂದಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ವಿಷಯ ತಿಳಿದ ಕಲ್ಪನಾ ಕೂಡ ಮನೆಲ್ಲಿ ಫ್ಯಾನ್ಗೆ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಗ್ರಾಮದಾದ್ಯಂತ ದುಃಖದ ಛಾಯೆ ಮೂಡಿಸಿದೆ. ಎರಡೂ ಕುಟುಂಬಗಳು ದುಃಖದಲ್ಲಿ ಮುಳುಗಿವೆ. ಮೃತರ ಕುಟುಂಬಗಳ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)