More

    ಪ್ರೀತಿಸುವಂತೆ ಬೆದರಿಸಿದ್ದ ಯುವಕನಿಗೆ 3 ವರ್ಷ ಜೈಲು

    ಬೆಂಗಳೂರು: ಪ್ರೀತಿಸುವಂತೆ ಬೆದರಿಕೆ ಒಡ್ಡಿ ಲೈಂಗಿಕವಾಗಿ ತೊಂದರೆ ನೀಡಿದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ 1ನೇ ಎಫ್ ಟಿಎಸ್ ಸಿ ನ್ಯಾಯಾಲಯ ತೀರ್ಪು ನೀಡಿದೆ.

    ಕೃಷ್ಣ ಲೇಔಟ್ ಬಿ.ಜಿ. ರಸ್ತೆ ನಿವಾಸಿ ಶಿವ ಅಲಿಯಾಸ್ ಶಿವು (26) ಅಪರಾಧಿ. ಪೋಕ್ಸೋ ಕಾಯ್ದೆಗೆ 3 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಕೆ.ಎನ್. ರೂಪಾ ಶಿಕ್ಷೆ ಪ್ರಕಟಿಸಿದ್ದಾರೆ. ಜತೆಗೆ ಬಾಲಕಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಡಿಎಲ್‌ಎಸ್‌ಎಗೆ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.

    ಹದಿನಾರು ವರ್ಷದ ಬಾಲಕಿ ಶಾಲೆಗೆ ಹೋಗುವಾಗ ಶಿವ ಹಿಂಬಾಲಿಸುತ್ತಾ ಪ್ರೇಮಪತ್ರ ಕೊಡುತ್ತಿದ್ದ. ಪ್ರೀತಿಸದಿದ್ದಲ್ಲಿ ಆ್ಯಸಿಡ್ ಹಾಕುವುದಾಗಿ ಬೆದರಿಸಿ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಈ ವಿಷಯ ತಿಳಿದ ಬಾಲಕಿಯ ತಾಯಿ, ಹುಳಿಮಾವು ಠಾಣೆಗೆ ದೂರು ಸಲ್ಲಿಸಿದ್ದರು. ಇನ್‌ಸ್ಪೆಕ್ಟರ್ ಚಂದ್ರಪ್ಪ ಪ್ರಕರಣ ದಾಖಲಿಸಿ ಶಿವನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts