

ದಾಬಸ್ಪೇಟೆ: ಕುಳ್ಳಗಿದ್ದೇನೆಂದು ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕೆಂಗಲ್ ಕೆಂಪೋಹಳ್ಳಿ ಬಳಿ ಭಾನುವಾರ ನಡೆದಿದೆ.
ಉದಯ್ರಾಜ್(27) ಮೃತ. ಬೆಂಗಳೂರು ಯಶವಂತಪುರ ಮೂಲದ ನಿವಾಸಿಯಾಗಿದ್ದಾನೆ.ಹಲವು ವರ್ಷಗಳಿಂದ ಪುರ್ವಿಕಾ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ, ಕುಳ್ಳಗಿದ್ದೇನೆಂಬ ಖಿನ್ನತೆಗೆ ಒಳಗಾಗಿ ಪರಿಹಾರಕ್ಕಾಗಿ ಹಲವು ಆಸ್ಪತ್ರೆಗಳನ್ನೂ ಸಂಪರ್ಕಿಸಿದ್ದ ಎನ್ನಲಾಗುತ್ತಿದೆ.
ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಅದರಲ್ಲಿ ತನ್ನ ಸಾವಿಗೆ ಮಾನಸಿಕ ಒತ್ತಡವೇ ಕಾರಣ ಎಂದು ಹೇಳಿದ್ದಾನೆ. ತಂದೆ ಹಾಗೂ ಕಂಪನಿಯ ಮ್ಯಾನೇಜರ್ ಮೊಬೈಲ್ಗೆ ವಿಡಿಯೋ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಲೊಕೇಷನ್ ಕಳುಹಿಸಿ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕುಟುಂಬಸ್ಥರು ಸ್ಥಳಕ್ಕೆ ಹೊಗುವಷ್ಟರಲ್ಲಿ ಮೃತಪಟ್ಟಿದ್ದಾನೆ. ದಾಬಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.