ರೀಲ್ಸ್​ಗಾಗಿ ರಸ್ತೆ ಮೇಲೆ ಕಂತೆ ಕಂತೆ ಹಣ ಎಸೆದ ಯುವಕ! ಬಳಿಕ ನಡೆಯಿತು ನೋಡಿ ಹೈಡ್ರಾಮಾ!!

reals
Published on

ಹೈದರಾಬಾದ್: ರೀಲ್ಸ್​ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಯುವಜನ ನಾನಾ ರೀತಿಯ ಕಸರತ್ತು ಮಾಡುವುದನ್ನು ನೋಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ಯುವಕ ಇನ್‌ಸ್ಟಾಗ್ರಾಂನಲ್ಲಿ ಲೈಕ್‌ ಗಳಿಗಾಗಿ 50ಸಾವಿರ ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ಎಸೆದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೈದರಾಬಾದ್​ನ ಕೆಪಿಎಚ್‌ಬಿ ಸರ್ವಿಸ್ ರಸ್ತೆ, ಮೆಟ್ರೊ ನಿಲ್ದಾಣ, ಕುಕಟ್‌ಪಲ್ಲಿಯ ಜನದಟ್ಟಣೆ ಪ್ರದೇಶಗಳಲ್ಲಿ ಯುವಕ ಗಾಳಿಯಲ್ಲಿ ನೋಟುಗಳನ್ನು ಎಸೆದಿದ್ದು, ಜನರು ಅದನ್ನು ತೆಗೆದುಕೊಳ್ಳಲು ಮುಗಿಬಿದ್ದರು.

ಈ ವಿಡಿಯೋವ ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಬಳಕೆದಾರರು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ನಡುರಸ್ತೆಯಲ್ಲಿ ಜನರ ಜೀವಕ್ಕೆ ಕುತ್ತು ತಂದ ಹಾಗೂ ಟ್ರಾಫಿಕ್‌ಗೆ ಕಾರಣನಾಗಿರುವುದಲ್ಲದೆ ಅಶಾಂತಿ ಸೃಷ್ಟಿಸಿದ ಯುವಕನ ವಿರುದ್ಧ ಕ್ರಮ ಜನರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಆದರೆ ಆತ ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ವಿಡಿಯೋ ಮಾಡಿ ಅಪ್‌ಲೋಡ್ ಮಾಡುವ ಹಾಗೂ ವೈರಲ್ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ವೀಡಿಯೋ ವೈರಲ್​ ಆಗುತ್ತಿದ್ದಂತೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net