SRH ಒಡತಿ ಕಾವ್ಯಾ ಮಾರನ್​ಗೆ ಪಬ್ಲಿಕ್​ನಲ್ಲೇ ಪ್ರಪೋಸ್​ ಮಾಡಿದ ಯುವಕ! ಇಲ್ಲಿದೆ ವೈರಲ್​​ ಫೋಟೋಗಳು..

dk-2025-02-08t175059753-67a74c5801c26
Published on

ಇಂಡಿಯನ್​​ ಪ್ರೀಮಿಯರ್​ ಲೀಗ್​ನ ಸನ್​ ರೈಸರ್ಸ್​ ಹೈದರಾಬಾದ್​(SRH) ಪ್ರಾಂಚೈಸಿಯ ಒಡತಿ, ಅಭಿಮಾನಿಗಳ ಪ್ರೀತಿಯ ಕ್ರಶ್​​ ಕಾವ್ಯ ಮಾರನ್​ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇದೀಗ ಲವ್​ ವಿಷಯವೊಂದಕ್ಕೆ ಮತ್ತೆ ಸಾಮಾಜಿಕ ಮಾಧ್ಯಮಗಳ ಸಖತ್​ ಸುದ್ದಿ ಮಾಡುತ್ತಿದ್ದಾರೆ.

ಅವರ ಬಗ್ಗೆ ಚರ್ಚೆಯಾಗುತ್ತಿರುವ ವಿಷಯ ಮದುವೆ, ಡೇಟಿಂಗ್​ ಮತ್ತು ಬಾಯ್​ಫ್ರೇಂಡ್ಸ್​ಗಳಲ್ಲದಿದ್ದರೂ ಅದು ಫ್ಯಾನ್ಸ್​ ಲವ್​​. ಹೌದು, ಕಳೆದ ಎರಡು ವರ್ಷಗಳಿಂದೆ 2023ರ ಸೌತ್​ ಆಫ್ರಿಕಾದ ಟಿ-20 ಲೀಗ್​​ನಲ್ಲಿ ಸನ್​ ರೈಸರ್ಸ್​ ಇಸ್ಟರ್ನ್​ ಕೇಪ್​​ ತಂಡವನ್ನು ಖರೀದಿಸಿತ್ತು.

ಆಗ ಪಾರ್ಲ್​ ರಾಯಲ್ಸ್​ ಮತ್ತು ಸನ್​ ರೈಸರ್ಸ್​ ಇಸ್ಟರ್ನ್​ ಕೇಪ್​​ ತಂಡದ ನಡುವೆ ನಡೆದ ಪಂದ್ಯದಲ್ಲಿ ವಿದೇಶಿ ಫ್ಯಾನ್​​ ಒಬ್ಬರು ''​ವಿಲ್​ ವಿ ಮ್ಯಾರಿಮಿ ಕಾವ್ಯ ಮಾರನ್​'' ಎಂದು ಬರೆದುಕೊಂಡಿರುವ ಫೋಟೋವೊಂದು ಸಖತ್​ ವೈರಲ್​ ಆಗಿತ್ತು. ಇನ್ನೆನ್ನು ಕೆಲ ತಿಂಗಳು ಬಳಿಕ IPL ಆರಂಭವಾಗಿಲಿದ್ದು, ಇದೀಗ ಮತ್ತೆ ಅದೇ ಫೋಟೋವನ್ನು ಅಭಿಮಾನಿಗಳ ಮತ್ತು ಮಿಮ್ಸ್​ ಪೇಜ್​ಗಳು ವೈರಲ್​ ಮಾಡುತ್ತಿದ್ದಾರೆ.

ಈ ವೈರಲ್​ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್​ ಆಗುತ್ತಿದ್ದು, 487.6K ವೀಕ್ಷಣೆ ಪಡೆದಿದೆ. ಕಾವ್ಯ ಚೈನ್ನೈ ಮೂಲದ ಮಾಧ್ಯಮ ಮತ್ತು ದೂರದರ್ಶನದ ಗ್ರೂಪ್​ ಮತ್ತು ಸನ್​ಟಿವಿ ನೆಟ್​ ವರ್ಕ್​ ಮಾಲೀಕ ಕಲಾನಿಧಿ ಮಾರನ್​ ಅವರ ಪುತ್ರಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net