ದುಬೈಯಲ್ಲಿ ಅಪಘಾತ, ಉಳ್ಳಾಲದ ಯುವಕ ಸಾವು

ull (1)
Published on

ಉಳ್ಳಾಲ: ಸೌದಿ ಅರೇಬಿಯಾದಲ್ಲಿ ಇತ್ತೀಚೆಗೆ ಎರಡು ಬಸ್‌ಗಳ ನಡುವೆ ನಡೆದ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್‌ನಗರ ನಿವಾಸಿ ಮೊಹಮ್ಮದ್ ಎಂಬುವರ ಪುತ್ರ ಅಬ್ದುಲ್ ರಾಝಿಕ್(27) ಮೃತಪಟ್ಟಿದ್ದಾರೆ. ದುಬೈಯ ಜುಬೈಲ್‌ನಲ್ಲಿ ಪಾಲಿಟೆಕ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅವರು ರಜೆ ಹಿನ್ನೆಲೆಯಲ್ಲಿ ಜುಲೈ 11ರಂದು ಊರಿಗೆ ಆಗಮಿಸಿ ಆ.15ರಂದು ದುಬೈಗೆ ಹಿಂದಿರುಗಿದ್ದರು. ಭಾನುವಾರ ಸಂಜೆ ಕಂಪನಿಗೆ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿದೆ. ಅಪಘಾತ ತೀವ್ರತೆಗೆ ರಾಝಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ತಂದೆ, ತಾಯಿ, ಮೂವರು ಸಹೋದರಿಯರು, ಸಹೋದರನನ್ನು ಅಗಲಿದ್ದಾರೆ. ಅವರ ಓರ್ವ ಸಹೋದರ ಹಾಗೂ ಸಹೋದರಿ ಈ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net