ಡೇರಿಯ ಹಾಲು ಕೊಳ್ಳುವ ಮುನ್ನ ಎಚ್ಚರ! ಡೇರಿಯ ಹಾಲಿನಲ್ಲೇ ಸ್ನಾನ ಮಾಡಿದ್ದಾನೆ ಈ ಭೂಪ

milk
Published on

ಅಂಕಾರಾ: ನೀರಲ್ಲಿ ಸ್ನಾನ ಮಾಡೋದು ಓಕೆ. ಆದರೆ ಹಾಲಲ್ಲಿ ಸ್ನಾನ ಮಾಡೋದು? ಅದರಲ್ಲೂ ಲಕ್ಷಾಂತರ ಜನರಿಗೆ ಹಾಲು ತಲುಪಿಸುವ ಡೇರಿಯ ಹಾಲಿನಲ್ಲೇ ಸ್ನಾನ ಮಾಡಿಬಿಟ್ಟರೆ?

ಹೌದು! ಇಂತದ್ದೊಂದು ಘಟನೆ ನಿಜವಾಗಿಯೂ ನಡೆದಿದೆ. ಟರ್ಕಿಯ ಡೇರಿಯೊಂದರಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಈ ರೀತಿಯ ಕಿಡಿಗೇಡಿ ಕೆಲಸ ಮಾಡಿದ್ದಾನೆ. ಡೇರಿಯ ಹಾಲಿನಲ್ಲೇ ಸ್ನಾನ ಮಾಡಿದ್ದಷ್ಟೇ ಅಲ್ಲದೆ, ಅದರ ವಿಡಿಯೋವನ್ನು ಹರಿಬಿಟ್ಟು, ಅಲ್ಲಿನ ಜನರು ಹಾಲು ಕೊಳ್ಳುವುದಕ್ಕೂ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ತಂದಿಟ್ಟಿದ್ದಾನೆ.

ಎಮ್ರೆ ಸಯಾರ್​ ಹಾಲಿನಲ್ಲೇ ಸ್ನಾನ ಮಾಡಿರುವ ವ್ಯಕ್ತಿ. ಈತ ಮಧ್ಯ ಅನಾಟೋಲಿಯನ್​ ಪ್ರಾಂತ್ಯದ ಕೊನ್ಯಾದಲ್ಲಿನ ಡೇರಿಯೊಂದರಲ್ಲಿ ಕಾಂಟ್ಯಾಕ್ಟ್​ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಕೆಲಸದ ವೇಳೆ ಉದ್ದಟತನ ತೋರಿರುವ ಈತ ಹಾಲಿನಲ್ಲೇ ಸ್ನಾನ ಮಾಡಿದ್ದಾನೆ. ಆ ವಿಡಿಯೋವನ್ನು ಟಿಕ್​ಟಾಕ್​ನಲ್ಲಿ ಹರಿಬಿಟ್ಟು ಸಾಕಷ್ಟು ಲೈಕ್ಸ್​ ಗಿಟ್ಟಿಸಿಕೊಂಡಿದ್ದಾನೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಡೇರಿ ಎಚ್ಚೆತ್ತುಕೊಂಡಿದೆ. ತಕ್ಷಣ ಎಮ್ರೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅದು ಹಾಲಲ್ಲ, ಡೇರಿಯ ಬಾಯ್ಲರ್​ಗಳನ್ನು ತೊಳೆಯಲು ಬಳಸುವ ಲಿಕ್ವಿಡ್​ ಎಂದು ಡೇರಿ ಸಮಜಾಯಿಷಿ ಕೊಟ್ಟಿದೆ. ಆದರೆ ಅದನ್ನು ಒಪ್ಪದ ಅಲ್ಲಿನ ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲೆಂದು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಸದ್ಯಕ್ಕೆ ಡೇರಿಯನ್ನು ಮುಚ್ಚಲಾಗಿದ್ದು, ಅದಕ್ಕೆ ತಕ್ಕ ದಂಡವನ್ನೂ ವಿಧಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net