

ತೆಲಂಗಾಣ: ಮಹಿಳೆಯರು ಕಾರ್ಯವ್ಯಾಪ್ತಿ ಇಲ್ಲದೇ ಇರುವ ಯಾವುದೇ ಕ್ಷೇತ್ರಗಳು ನಮ್ಮ ದೇಶದಲ್ಲಿ ಇಲ್ಲ. ಪ್ರತಿ ರಂಗದಲ್ಲೂ ಹೆಣ್ಣು ಮಕ್ಕಳ ಸಾಧನೆ ಅಪಾರವಾಗಿದೆ. ಶಿಕ್ಷಣ, ಸಾಮಾಜಿಕ, ಆಡಳಿತ, ರಾಜಕೀಯ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುವ ಮೂಲಕ ಮುಂಚೂಣಿಯಲ್ಲಿ ಇದ್ದಾರೆ. ಇದರೊಂದಿಗೆ ದೇಶದ ರಕ್ಷಣೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ತಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಮೂಟೆ ಕಟ್ಟಿ ಒಂದು ಬದಿಗಿಟ್ಟು ಪರೀಕ್ಷೆಯ ತಯಾರಿಯ ಮೇಲೆ ಒಳ್ಳೆಯ ಋಷಿ ಮುನಿಗಳ ತಪ್ಪಸ್ಸಿನಂತೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಪರೀಕ್ಷೆಯ ಫಲಿತಾಂಶ ಹೊರ ಬಿದ್ದಾಗಲೂ ಸಹ ಪ್ರತಿಭಾವಂತ ಅಭ್ಯರ್ಥಿಗಳ ಅನೇಕ ಸ್ಪೂರ್ತಿ ತುಂಬುವ ಕಥೆಗಳು ನಮಗೆ ಕೇಳಲು ಮತ್ತು ನೋಡಲು ಸಿಗುತ್ತವೆ. ಓದಬೇಕೆಂಬ ಹಂಬಲವಿದ್ದರೆ ಅದಕ್ಕೆ ಯಾವುದೇ ರೀತಿಯ ವಿಷಯಗಳು ಅಡ್ಡಿಯಾಗುವುದಿಲ್ಲ ಅಂತ ಅನ್ನೋದಕ್ಕೂ ಸಹ ನಮ್ಮಲ್ಲಿ ಅನೇಕ ಉದಾಹರಣೆಗಳಿವೆ.
ಇಲ್ಲಿಯೂ ಸಹ ಅಂತಹದೇ ಒಂದು ಜೀವನಕ್ಕೆ ಸ್ಪೂರ್ತಿ ತುಂಬುವ ಒಂದು ಕಥೆ ಇದೆ ನೋಡಿ. ಇತ್ತೀಚೆಗೆ ತೆಲಂಗಾಣದಲ್ಲಿ ಬಿಡುಗಡೆಯಾದ ಹಲವು ಉದ್ಯೋಗ ಫಲಿತಾಂಶಗಳಲ್ಲಿ ಮಹಿಳೆಯರು ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಕೋಚಿಂಗ್ ಇಲ್ಲದಿದ್ದರೂ ಬಿಡುವಿನ ವೇಳೆಯಲ್ಲಿ ಓದಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಸಾಧಿಸಿದ್ದಾರೆ.
ಅದೇ ರೀತಿ ಗೃಹಿಣಿಯೊಬ್ಬರು ಕುಟುಂಬ ನಿರ್ವಹಣೆಗಾಗಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಾ ನಂತರ ಸ್ಪರ್ಧಾರ್ತಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಯಶಸ್ವಿಯಾಗಿದ್ದಾರೆ. ಒಂದೇ ಬಾರಿಗೆ ಎರಡು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ಎಲ್ಲರಿಗೂ ಸ್ಫೂರ್ತಿಯಾಗಿದ್ದಾಳೆ.
ಒಂದೇ ಎರಡು ಸರ್ಕಾರಿ ನೌಕರಿ: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಕೇಸಮುದ್ರಂ ಮಂಡಲದ ಕಲ್ವಾಲಾ ಗ್ರಾಮದ ಜ್ಯೋತಿ. ಇವರು ಎಂಎ ಮತ್ತು ಬಿಇಡಿ ವಿದ್ಯಾಭ್ಯಾಸ ಮುಗಿಸಿದ್ದಾಳೆ. ಪತಿ ನವೀನ್ ಜತೆಗೂಡಿ ಸಣ್ಣ ಹೋಟೆಲ್ ನಡೆಸುತ್ತಿದ್ದಾರೆ. ಸರ್ಕಾರಿ ನೌಕರಿ ಪಡೆಯಲೇಬೇಕು ಎಂಬ ಕನಸು ನನಸು ಮಾಡಿಕೊಂಡಿದ್ದಾಳೆ. ಸರ್ಕಾರಿ ಉದ್ಯೋಗ ಪಡೆಯಲು ಬಿಡುವಿನ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಳು. ಕಳೆದ ವರ್ಷ ಆಗಸ್ಟ್‌ನಲ್ಲಿ ಜ್ಯೋತಿ ಅವರು ಟಿಜಿಟಿ, ಪಿಜಿಟಿ ಹಾಗೂ ಜೂನಿಯರ್ ಲೆಕ್ಚರರ್ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದರು. ವಾರದ ಹಿಂದೆ ಇವುಗಳ ಫಲಿತಾಂಶ ಬಂದಿದ್ದು ಪಿಜಿಟಿ ಫಲಿತಾಂಶದಲ್ಲಿ ಜ್ಯೋತಿಗೆ ಕೆಲಸ ಸಿಕ್ಕಿದೆ. ಹಾಗೂ ಇತ್ತೀಚೆಗೆ ಪ್ರಕಟವಾದ ಜೂನಿಯರ್ ಲೆಕ್ಚರರ್ ಹುದ್ದೆಗೂ ಆಯ್ಕೆಯಾಗಿದ್ದಾಳೆ.
ಒಂದೇ ಬಾರಿಗೆ ಎರಡು ಸರ್ಕಾರಿ ನೌಕರಿ ಸಿಕ್ಕಿದ್ದರಿಂದ ಜ್ಯೋತಿ ಅವರ ಕುಟುಂಬದಲ್ಲಿ ಸಂತಸ ಮೂಡಿದೆ. ಆಕೆಯ ಪರಿಶ್ರಮದಿಂದ ಯಶಸ್ಸು ಗಳಿಸಿದ್ದಾಳೆ ಎಂದು ಕುಟುಂಬ ಸದಸ್ಯರೊಬ್ಬರು ಮಾಹಿತಿ ತಿಳಿಸಿದ್ದಾರೆ. ಕುಟುಂಬದ ನಿರ್ವಹಣೆಗ ಜೊತೆಗೆ ಎರಡು ಸರ್ಕಾರಿ ಉದ್ಯೋಗ ಗಳಿಸಿರುವ ಜ್ಯೋತಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.