More

    ಬಾಂಬ್ ಸ್ಫೋಟ ಸಂಭವಿಸಿದ ರಾಮೇಶ್ವರಂ ಕೆಫೆಯ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಬೆಂಗಳೂರು: ಸಿಲಿಕಾನ್ ಸಿಟಿ ಮಾರತ್​ಹಳ್ಳಿ ವ್ಯಾಪ್ತಿಯ ಕುಂದಲಹಳ್ಳಿ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಬಾಂಬ್‌ ಸ್ಫೋಟಗೊಂಡು ಹಲವರಿಗೆ ಗಂಭೀರ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡ ತನಿಖೆಯನ್ನು ಚುರುಕುಗೊಳಿಸುತ್ತಿದೆ.

    ಇದನ್ನೂ ಓದಿ: ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಸ್ಫೋಟ ಸಂಭವಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಎಫ್ಎಸ್ ಎಲ್ ತಜ್ಞರು, ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ. ಅತ್ತ, ಪೊಲೀಸರು ಹೋಟೆಲ್ ಹಾಗೂ ಸುತ್ತಮುತ್ತಲಿನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಗ್ರಾಹಕನೊಬ್ಬ ಹೋಟೆಲ್ ನೊಳಕ್ಕೆ ತಂದಿದ್ದ ಬ್ಯಾಗ್ ನಿಂದಲೇ ಸ್ಫೋಟವಾಗಿರುವುದು ಖಚಿತವಾಗಿದೆ ಎಂದು ಹೇಳಲಾಗಿದೆ.

    ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಗೆ ದಿನನಿತ್ಯ ಸಾಕಷ್ಟು ಗ್ರಾಹಕರು ಬರುತ್ತಾರೆ. ಪಕ್ಕದಲ್ಲಿರುವ ಬಿಸಿನಸ್​ ಟೆಕ್​ಪಾರ್ಕ್​ಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಇಲ್ಲಿನ ತಿಂಡಿ ಭಾರೀ ಇಷ್ಟವಂತೆ. ಇಲ್ಲಿನ ಆಹಾರ ಪದಾರ್ಥಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಈ ಕೆಫೆಗೆ ನಿತ್ಯ ಸಾವಿರಾರು ಆಹಾರ ಪ್ರಿಯರು ಭೇಟಿ ನೀಡುತ್ತಾರೆ. ಹಾಗಾದರೆ ಈ ರಾಮೇಶ್ವರಂ ಕೆಫೆಯ ತಿಂಗಳ ಆದಾಯ ಎಷ್ಟು ಗೊತ್ತಾ? ವರ್ಷಕ್ಕೆ ಎಷ್ಟು ಕೋಟಿ ಆದಾಯ ಬರುತ್ತೆ ಗೊತ್ತಾ..ನೀವು ಊಹಿಸಲು ಸಾಧ್ಯವಿಲ್ಲ.!

    ರಾಮೇಶ್ವರಂ ಕೆಫೆ 2021 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ದಿವ್ಯಾ ಮತ್ತು ರಾಘವೇಂದ್ರ ರಾವ್ ಎಂಬ ದಂಪತಿ ಈ ಕೆಫೆಯನ್ನು ಆರಂಭಿಸಿದ್ದಾರೆ. ಆದರೆ ಅವರಿಗೆ ಅಬ್ದುಲ್ ಕಲಾಂ ಎಂದರೆ ತುಂಬಾ ಇಷ್ಟ. ಕಲಾಂ ಅವರ ಹುಟ್ಟೂರಾದ ರಾಮೇಶ್ವರಂ ಹೆಸರಿನಲ್ಲಿ ಈ ಹೋಟೆಲ್ ತೆರೆಯಲಾಗಿದೆ. ರಾಮೇಶ್ವರಂ ಕೆಫೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಬಹಳ ಪ್ರಸಿದ್ಧಯಾಗಿದೆ.

    ಈ ಕೆಫೆಯಲ್ಲಿ ದೊರೆಯುವ ಆಹಾರ ಪದಾರ್ಥಗಳ ಗುಣಮಟ್ಟ, ಪ್ರಮಾಣ ಮತ್ತು ರುಚಿಯಲ್ಲಿ ಉತ್ತಮವಾಗಿರುವುದರಿಂದ ಸಾಕಷ್ಟು ಗ್ರಾಹಕರು ಈ ಕೆಫೆಗೆ ಬರ್ತಾರೆ. ಆಹಾರ ಪ್ರಿಯರು ಈ ಕೆಫೆಗೆ ಹೆಚ್ಚಾಗಿ ಸೇರುತ್ತಾರೆ. ಈ ಕೆಫೆಯಲ್ಲಿ ಪ್ರತಿದಿನ ಸುಮಾರು 6,500 ಜನರು ಆಹಾರ ಸೇವಿಸುತ್ತಾರಂತೆ. ಬೆಂಗಳೂರಿನ ಐಟಿಬಿಟಿ ಜನರು, ಉದ್ಯಮಿಗಳು, ಪ್ರೇಮಿಗಳು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ.

    4.5 ಕೋಟಿ ರೂ. ಆದಾಯ: ಸಾವಿರಾರು ಗ್ರಾಹಕರು ಬರುವ ಈ ಕೆಫೆಗೆ ತಿಂಗಳಿಗೆ 4.5 ಕೋಟಿ ರೂ. ಆದಾಯ ಬರುತ್ತದೆ. ಇನ್ನು ವಾರ್ಷಿಕವಾಗಿ 50 ಕೋಟಿ ರೂ.ಗೂ ಹೆಚ್ಚು ವ್ಯಾಪಾರ ನಡೆಯಲಿದೆ. ಈ ಕೆಫೆಯಲ್ಲಿ ಇಡ್ಲಿ, ತುಪ್ಪದ ಇಡ್ಲಿ, ಬೆಣ್ಣೆ ಇಡ್ಲಿ, ಲೆಮನ್​ ಇಡ್ಲಿ ಸಾಂಬಾರ್ ಇಡ್ಲಿ ತುಂಬಾ ಫೇಮಸ್. ಇತ್ತೀಚೆಗೆ ರಾಮೇಶ್ವರಂ ಕೆಫೆ ತನ್ನ ಶಾಖೆಯನ್ನು ಹೈದರಾಬಾದ್‌ನಲ್ಲಿಯೂ ತೆರೆಯಲಾಗಿದೆ. ಕೆಫೆ ಮಾಲೀಕರು ದೇಶಾದ್ಯಂತ ವಿಸ್ತರಿಸಲು ಯೋಚನೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

    ಶುಕ್ರವಾರ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಎಸ್​ಎಲ್​​ ​ವರದಿ ಬಹಿರಂಗವಾಗಿದ್ದು, 2 ಬಾಂಬ್ ಒಂದೇ ಸಲ ಸ್ಫೋಟಿಸಲು ಆರೋಪಿಯಿಂದ ಪ್ಲ್ಯಾನ್ ಮಾಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

    ಟೈಮರ್​ ಫಿಕ್ಸ್​ ಮಾಡುವಾಗ 5 ಸೆಕೆಂಡ್​ ಅಂತರದ ಬಗ್ಗೆ ಗೊತ್ತಿಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. 5 ಸೆಕೆಂಡ್ ಅಂತರದಲ್ಲಿ 2 ಬಾಂಬ್​ ಸ್ಫೋಟವಾಗಿದ್ದರಿಂದ ಪ್ರಮಾದ ತಪ್ಪಿದೆ. ಒಂದೇ ವೇಳೆ 2 ಬಾಂಬ್ ಸ್ಫೋಟಗೊಂಡಿದ್ದರೆ ಕಟ್ಟಡವೇ ನೆಲಸಮ ಆಗುವುದರೊಂದಿಗೆ ಸಾವು-ನೋವು ಹೆಚ್ಚಾಗುವ ಸಾಧ್ಯತೆ ಇತ್ತು ಎಂದು ಪೊಲೀಸ್​ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    https://www.vijayavani.net/online-trading-scam-gurugram-doctor-falls-victim-loses-rs-2-5-crore

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts