

ಬೆಂಗಳೂರು: ಜಿಮ್ನಲ್ಲಿ ಕಸರತ್ತು ನಡೆಸುತ್ತಲೇ ಕುಸಿದು ಬಿದ್ದ ಅವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಸಂಭವಿಸಿದೆ.
ವಿನಯಕುಮಾರಿ(35) ಮೃತರು. ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಇವರು, ಮಲ್ಲೇಶಪಾಳ್ಯದ ಚಾಲೆಂಜ್ ಪಿಟ್ನೆಸ್ ಸೆಂಟರ್ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ವೇಟ್ಸ್ ಎತ್ತಲು ಹೋದಾಗ ಏಕಾಏಕಿ ಕುಸಿದು ಬಿದ್ದರು. ಸ್ಥಳದಲ್ಲಿದ್ದವರು ತಕ್ಷಣ ಆಕೆಯನ್ನ ಮೇಲಕ್ಕೆ ಎತ್ತಿ ಎಚ್ಚರಿಸಲು ಯತ್ನಿಸಿದರೂ ಎಚ್ಚರವಾಗಲಿಲ್ಲ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ ಬದುಕಲಿಲ್ಲ.
ಜಿಮ್ನಲ್ಲಿ ವರ್ಕೌಟ್ ಮಾಡುವಾಗಲೇ ವಿನಯಕುಮಾರಿ ಕುಸಿದು ಬಿದ್ದು ಮೃತಪಟ್ಟ ದೃಶ್ಯ ಜಿಮ್ ಸೆಂಟರ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರು ಮೂಲದ ವಿನಯಕುಮಾರಿ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.