ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿಯೇ ಬಿತ್ತು ವಿಂಡ್​ ಪವರ್​ ಫ್ಯಾನ್​: ತಪ್ಪಿತು ಭಾರೀ ದುರಂತ!

1308641
Published on

ಬಾಗಲಕೋಟೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯೇ ಏಕಾಏಕಿ ವಿಂಡ್​ ಪವರ್​ ಫ್ಯಾನ್​ ಬಿದ್ದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕೆಲಸಗಾರರು ಪಾರಾಗಿದ್ದಾರೆ.

ಹಿರೇಓತಗೇರಿ ಗ್ರಾಮದಲ್ಲಿ ಹೊಲಗಳಿಗೆ ಅಳವಡಿಸಲಾಗಿರುವ ವಿಂಡ್ ಪವರ್ ಫ್ಯಾನ್​ ಬಿದ್ದಿದ್ದು, ಅದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.

ಇಳಕಲ್ ತಾಲೂಕಿನ‌ ಹಿರೇಓತಗೇರಿ ಗ್ರಾಮದಲ್ಲಿ ಕೆಲವೆಡೆ ವಿಂಡ್​ ಪವರ್ ಫ್ಯಾನ್​ ಅಳವಡಿಕೆ ಮಾಡಲಾಗಿದೆ. ಆದರೆ ಭಾನುವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿಯೇ ತುಂಡಾಗಿ ಬಿದ್ದಿದ್ದು, ಇಲ್ಲಿನ ಜನರಿಗೆ ಆತಂಕ ಮನೆ ಮಾಡಿದೆ. ಫ್ಯಾನ್​ ತುಂಡರಿಸಿ ಬಿದ್ದಿದ್ದರಿಂದ ಬೆಳೆಹಾನಿ ಆಗಿದೆ ಎಂದು ಹೊಲದ ಮಾಲೀಕ ಆರೋಪಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net