ವಿಪ್​ ಉಲ್ಲಂಘನೆ: ಕೊಳ್ಳೇಗಾಲ ನಗರಸಭೆಯ 7 ಸದಸ್ಯರು ಅನರ್ಹ

kollegala bsp
Published on

ಚಾಮರಾಜನಗರ: ಕೊಳ್ಳೇಗಾಲ ನಗರಸಭೆಯ 7 ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸದಸ್ಯರಾದ ನಾಗಮಣಿ, ಗಂಗಮ್ಮ, ನಾಸೀರ್ ಪಾಷ, ಎನ್.ಪವಿತ್ರಾ, ಪ್ರಕಾಶ್, ರಾಮಕೃಷ್ಣ, ನಾಗಸುಂದ್ರ ಅನರ್ಹಗೊಂಡವರು. ಇವರೆಲ್ಲರೂ ಕೊಳ್ಳೇಗಾಲ ನಗರಸಭೆಯ ಬಿಎಸ್ಪಿ ಸದಸ್ಯರು.

ಈ ಸದಸ್ಯರೂ 2020ರ ಅಕ್ಟೋಬರ್ 29ರಂದು ನಡೆದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಎಸ್ಪಿ ಬಂಡಾಯ ಅಭ್ಯರ್ಥಿಯಾಗಿ ಗಂಗಮ್ಮ ಸ್ಪರ್ಧಿಸಿದ್ದರು. ಅತ್ತ ಎಸ್ಪಿಯಿಂದ ಜಯಮೇರಿ ಎಂಬುವರರು ಅಖಾಡಕ್ಕಿಳಿದಿದ್ದರು. ಪಕ್ಷದ ಅಭ್ಯರ್ಥಿ ಜಯಮೇರಿಗೆ ಮತ ಹಾಕುವಂತೆ ಬಿಎಸ್ಪಿ ಜಿಲ್ಲಾಧ್ಯಕ್ಷರು ವಿಪ್ ಜಾರಿಗೊಳಿಸಿದ್ದರೂ ಉಲ್ಲಂಘಿಸಿ ಬಂಡಾಯ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಬಿಜೆಪಿ ಸಹಾಯ ಪಡೆದು ಬಂಡಾಯ ಅಭ್ಯರ್ಥಿ ಗಂಗಮ್ಮ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೋಲಾಗಿತ್ತು.

ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ದೂರು ಜಯಮೇರಿ ದೂರು ನೀಡಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯಡಿ ಆ 7 ಜನರ ಸದಸ್ಯತ್ವವನ್ನು ಅನರ್ಹ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net