More

    ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಪ್ರಾಣಬಿಟ್ಟ ಗರ್ಭಿಣಿ! ಮನಕಲಕುತ್ತೆ ಸಾವಿನ ಕಾರಣ

    ರಾಯಚೂರು: ಗರ್ಭಿಣಿಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ತುಂಗಭದ್ರಾ ನದಿ ನೀರಿಗೆ ಹಾರಿ ಪ್ರಾಣಬಿಟ್ಟ ಘಟನೆ ಸಿಂಧನೂರು ತಾಲೂಕಿನ ದಢೇಸೂಗೂರು ಗ್ರಾಮದ ಬಳಿ ಸಂಭವಿಸಿದೆ.

    ಸಿರಗುಪ್ಪದ ಅಂಬಾನಗರ ನಿವಾಸಿ ಚೆನ್ನಮ್ಮ(35), ಇವರ ಮಕ್ಕಳಾದ ಸುಮಿತ್ರಾ(7) ಮತ್ತು ಪ್ರಶಾಂತ್​(5) ಮೃತ ದುರ್ದೈವಿಗಳು. ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿಂದ ಸೋಮವಾರ ಸಂಜೆ ಈ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಚೆನ್ನಮ್ಮಳ ಗಂಡ ರವಿ ಇತ್ತೀಗೆ ಕೋವಿಡ್‌ ಸೋಂಕಿಗೆ ಬಲಿಯಾಗಿದ್ದರು. ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ಪತ್ನಿಗೆ ಗಂಡನ ಸಾವು ತೀವ್ರ ಆಘಾತ ನೀಡಿತ್ತು. ನೊಂದ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಶ್ಲೀಲ ಚಿತ್ರ ತೋರಿಸಿ ಅದರಂತೆ ಸಹಕರಿಸು ಎಂದು ಹಿಂಸಿಸ್ತಾನೆ, ನನ್ನ ಗಂಡನ ಕಿರುಕುಳ ಸಹಿಸಲಾಗ್ತಿಲ್ಲ…

    ಕಾಲೇಜಿನ ಸ್ವಿಚ್ ಬೋರ್ಡ್​ನಲ್ಲಿ ಅವಿತ್ತಿದ್ದ ನಾಗ! ಮೊಬೈಲ್​ ಚಾರ್ಜ್​ಗೆ ಹಾಕಲು ಹೋದ ವಿದ್ಯಾರ್ಥಿಗೆ ಎದುರಾಯ್ತು ಕಂಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts