ಥೂ, ಇವನೆಂಥಾ ಕಾಮುಕ? ಸ್ಕ್ಯಾನಿಂಗ್ ಸೆಂಟರ್​ನ ಶೌಚಗೃಹದಲ್ಲಿ ಹೀಗಾ ಮಾಡೋದು?

blank

ತುಮಕೂರು: ಇಲ್ಲೊಬ್ಬ ಕಾಮುಕ ಸ್ಕ್ಯಾನಿಂಗ್ ಸೆಂಟರ್​ವೊಂದರ ಶೌಚಗೃಹದಲ್ಲಿ ಮೊಬೈಲ್​ ಇಟ್ಟು ಮಹಿಳೆಯರಿಗೆ ಗೊತ್ತಾಗದಂತೆ ಅವರ ದೃಶ್ಯ ಸೆರೆ ಹಿಡಿದು ವಿಕೃತಿ ಮರೆದು ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ನಗರದ ಗಾಂಧಿನಗರದಲ್ಲಿರುವ ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್​ನ ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ಮಹಿಳೆಯರ ವಿಡಿಯೋ ತೆಗೆಯುತ್ತಿದ್ದವನಿಗೆ ಮಂಗಳವಾರ ಸಾರ್ವಜನಿಕರೇ ಥಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹರೀಶ್ (35) ಆರೋಪಿ. ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್​ನಲ್ಲಿ ವರ್ಷದಿಂದ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಈತ ಶೌಚಗೃಹದ ಗೋಡೆ ಮೇಲೆ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ.

ಮಹಿಳೆಯೊಬ್ಬರು ಅನುಮಾನದಿಂದ ಮೊಬೈಲ್ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯ ಮೊಬೈಲ್​ನಲ್ಲಿ ಮಹಿಳೆಯರ ಹಲವಾರು ವಿಡಿಯೋಗಳಿವೆ ಎನ್ನಲಾಗಿದ್ದು, ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್​ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್​ಆರ್​ಟಿಸಿ ಬಸ್​ ಅನ್ನೇ ಕದ್ದ ಕಳ್ಳರು!

ಸಖತ್ ವೈರಲ್​ ಆಗ್ತಿರೋ ಮದ್ವೆ ಫೋಟೋ ಹಿನ್ನೆಲೆ ಗೊತ್ತಾ? ಯುವತಿ ಹೇಳಿಕೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!

Share This Article

ಹುಡುಗಿಯ ಹೃದಯವನ್ನು ಗೆಲ್ಲುವುದು ಹೇಗೆ..? Chanakya Niti

Chanakya Niti: ಈಗಿನ ಯಾವ ಹುಡುಗಿಯೂ ಹುಡುಗನ ಪ್ರೀತಿಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಚಾಣಕ್ಯನು ಪುರುಷನು…

ಕಂಕುಳಿನ ದುರ್ವಾಸನೆಯಿಂದ ಬೇಕಾ ಮುಕ್ತಿ? ಹಾಗಾದ್ರೆ ಈ ಸಿಂಪಲ್ ಟಿಪ್​ ಅನುಸರಿಸಿ, ಆಮೇಲೆ ನೋಡಿ ಚಮತ್ಕಾರ!

Bad Odour: ವಿಪರೀತ ಬೆವರುವುದು ಇಂದು ಅನೇಕರ ಸಮಸ್ಯೆ. ಪ್ರತಿಯೊಬ್ಬರು ಬೆವರುತ್ತಾರೆ. ಆದರೆ, ಎಲ್ಲರೂ ಬೆವರುವ…

ನೋ ಜಿಮ್​, ನೋ ಡಯಟ್​… ಬರೋಬ್ಬರಿ 20 KG ತೂಕ ಇಳಿಕೆ, ಯುವತಿಯ ಆರೋಗ್ಯದ ಗುಟ್ಟು ರಟ್ಟು! Weight Loss

Weight Loss : ಇತ್ತೀಚೆಗೆ ತೂಕ ಇಳಿಕೆ ತುಂಬಾ ಸುಲಭವಾಗಿದೆ. ಏಕೆಂದರೆ, ತೂಕ ಇಳಿಕೆಗೆ ಹಲವು…