ಬಸ್​ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್​ಆರ್​ಟಿಸಿ ಬಸ್​ ಅನ್ನೇ ಕದ್ದ ಕಳ್ಳರು!

bus theft
Published on

ತುಮಕೂರು: ಎಂತೆಂಥಾ ಕಳ್ಳರು ಇರ್ತಾರೆ ನೋಡಿ. ಸಾರಿಗೆ ಬಸ್​ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್​ ಅನ್ನು ಕದ್ದೊಯ್ದ ಕಳ್ಳರು, ಹಲವೆಡೆ ಸುತ್ತಾಡಿ ಮತ್ತೆ ಪಕ್ಕದ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ.

ಇಂತಹ ವಿಚಿತ್ರ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್​ಟಿಸಿ ಬಸ್ ಅನ್ನು ಸೋಮವಾರ ಕಳ್ಳರು ಕದ್ದೊಯ್ದಿದ್ದರು. ಕುಣಿಗಲ್ ತಾಲೂಕಿನ ಅಮೃತೂರು, ಯಡಿಯೂರು ಸುತ್ತಮುತ್ತಲ ಗ್ರಾಮಗಳ ಸಮೀಪ ಈ ಬಸ್​ ಅನ್ನು ಓಡಾಡಿಸಿದ ಕಳ್ಳರು ಮತ್ತೆ ಗುಬ್ಬಿ ತಾಲೂಕಿನ ಜನ್ನೇನಹಳ್ಳಿ ಗ್ರಾಮದತ್ತ ಬಂದಿದ್ದಾರೆ.

ಡೀಸೆಲ್​ ಖಾಲಿಯಾದ ಕಾರಣ ಆ ಬಸ್​ ಅನ್ನು ಜನ್ನೇನಹಳ್ಳಿ ಗ್ರಾಮದ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ. ಗುಬ್ಇ ಪಟ್ಟಣದ ಬಸ್​ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದಿರುವುದೇ ಕಳ್ಳರಿಗೆ ಪ್ಲಸ್​ ಪಾಯಿಂಟ್​ ಆಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net