ರಭಸವಾಗಿ ಹರಿಯುವ ನೀರಲ್ಲಿ ಹುಚ್ಚಾಟ ಮೆರೆದ ಬಸ್​ ಚಾಲಕ: ಸ್ವಲ್ಪ ಹೆಚ್ಚು-ಕಮ್ಮಿ ಆಗಿದ್ರೂ ದೊಡ್ಡ ಅನಾಹುತವೇ ಆಗ್ತಿತ್ತು

rain bus
Published on

ತುಮಕೂರು: ಅಪಾಯವನ್ನೂ ಲೆಕ್ಕಿಸದೆ ರಭಸವಾಗಿ ಹರಿಯುವ ನೀರಿನಲ್ಲಿ ಬಸ್ ಚಾಲಕ ಹುಚ್ಚಾಟ ಮೆರೆದ ಘಟನೆ ಪಾವಗಡ ತಾಲೂಕಿನ ವೆಂಕಟಾಪುರದಲ್ಲಿ ಸಂಭವಿಸಿದೆ. ಅದೃಷ್ಟವಶಾತ್​​ ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯಲ್ಲಿ ನಿರಂತರ ಮಳೆಗೆ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕೆರೆಗಳು ಕೋಡಿಬಿದ್ದಿವೆ. ವೆಂಕಟಾಪುರದಲ್ಲೂ ರಸ್ತೆ ಜಲಾವೃತಗೊಂಡಿದೆ. ಹಾಗಾಗಿ ಈ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಗ್ರಾಮಸ್ಥರು ತಾತ್ಕಾಲಿಕ ನಿರ್ಬಂಧ ಹೇರಿದ್ದಾರೆ. ಆದರೂ ಖಾಸಗಿ ಬಸ್​ ಚಾಲಕರೊಬ್ಬರು ಗ್ರಾಮಸ್ಥರ ಮನವಿಗೂ ಕಿವಿಗೊಡದೆ ನೀರಲ್ಲೇ ಬಸ್​ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದು, ಬಸ್​ ಹಳ್ಳದಲ್ಲಿ ಸಿಲುಕಿದೆ.

ಪಾವಗಡದಿಂದ ಹಿಂದೂಪುರಕ್ಕೆ ಹೊರಟಿದ್ದ ಈ ಬಸ್​ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಕೂಡಲೇ ಹಳ್ಳದ ನೀರಲ್ಲಿ ಸಿಲುಕಿದ ಬಸ್​ಅನ್ನು ಜೆಸಿಬಿ ಮೂಲಕ ಸ್ಥಳೀಯರು ಹೊರ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net