ಯುವಕ ಸ್ನಾನ ಮಾಡುವಾಗ ಬಾತ್​ರೂಮ್​ ಕಿಟಕಿಯಲ್ಲಿ ಹುಲಿಯ ದರ್ಶನ: ಮುಂದೇನಾಯ್ತು? Tiger

Tiger
Published on

Tiger : ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಪ್ರತಿನಿತ್ಯ ಹರಿದಾಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನ ಸೆಳೆದು ಕ್ಷಣಾರ್ಧದಲ್ಲಿ ವೈರಲ್​ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಒಂದು ವೇಳೆ ಹುಲಿ ನಿಮ್ಮ ಎದುರುಗಡೆ ಬಂದು ನಿಂತರೆ ಏನಾಗಬಹುದು? ಇದಕ್ಕೆ ಬಹುತೇಕರು ನೀಡುವ ಉತ್ತರ ಏನೆಂದರೆ, ಜೀವ ಬಾಯಿಗೆ ಬರುವುದಂತೂ ಖಚಿತ ಎನ್ನುತ್ತಾರೆ. ಹುಲಿ ಕಂಡೊಡನೆ ಎದ್ದನೋ ಬಿದ್ನೋ ಅಂತಾ ಓಡಿ ಹೋಗುತ್ತಾರೆ. ಅದೇ ಹುಲಿ ಬಾಗಿಲು ಮುಚ್ಚಿದ ಬಾತ್​ರೂಮ್​ ಒಳಗೆ ಕಿಟಕಿಯಿಂದ ತನ್ನ ತಲೆ ತೂರಿಸಿದರೆ ಒಳಗಿರುವ ವ್ಯಕ್ತಿಯ ಪರಿಸ್ಥಿತಿ ಹೇಗಿರಬೇಡ ಯೋಚನೆ ಮಾಡಿ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ಯುವಕನೊಬ್ಬ ಸ್ನಾನ ಮಾಡುತ್ತಿದ್ದಾಗ ತನ್ನ ಬಾತ್​ರೂಮ್​ನ ಕಿಟಕಿಯಲ್ಲಿ ಹುಲಿಯನ್ನು ನೋಡಿದ್ದಾನೆ. ಹೇಗೆಂದರೆ, ಸ್ನಾನಗೃಹದ ಒಂದು ಸಣ್ಣ ಕಿಟಕಿ ತೆರೆದಿತ್ತು. ಈ ವೇಳೆ ಹುಲಿ ಕಿಟಕಿ ಮೂಲಕ ತನ್ನ ತಲೆಯನ್ನು ಒಳಗೆ ತೂರಿತು. ಅಲ್ಲದೆ, ಒಳಗಿದ್ದ ವ್ಯಕ್ತಿಯನ್ನು ಸಹ ಅದು ನೋಡಿತು. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.

ಅಂದಹಾಗೆ, ವಿಡಿಯೋ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ವಿಡಿಯೋ ನೋಡಿ ಭಯ ಹಂಚಿಕೊಂಡರೆ, ಇನ್ನು ಕೆಲವರು ಇದು ತಮಾಷೆಯಾಗಿದೆ ಎಂದಿದ್ದಾರೆ. ಕೆಲವರಂತೂ ಹುಲಿಯೊಂದಿಗೆ ಒಟ್ಟಿಗೆ ಸ್ನಾನ ಮಾಡಬಹುದಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅದೇ ಸಮಯದಲ್ಲಿ, ಕೆಲವರು ವಿಡಿಯೋದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ.

ಇನ್ನು ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಭಾರತದಲ್ಲೇ ನಡೆದಿದೆ ಎಂದು ಹೇಳಲಾಗುತ್ತಿದೆ. ಯುವಕನ ಮನೆ ಕಾಡಿನ ಸಮೀಪವೇ ಇದೆ ಎಂಬ ವರದಿಗಳಿವೆ. ಕಾಡು ಪ್ರಾಣಿಗಳು ಕಾಡಿನ ಬಳಿ ಇರುವ ಅನೇಕ ಮನೆಗಳಿಗೆ ಅನಿರೀಕ್ಷಿತವಾಗಿ ಪ್ರವೇಶಿಸುವುದು ಅಲ್ಲಿ ಸಾಮಾನ್ಯವಾಗಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net