More

    ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!

    ಚೆನ್ನೈ: ತಮಿಳುನಾಡಿನ ತಿರುವಳ್ಳೂರ್​ ಪೊಲೀಸ್​ ವರಿಷ್ಠಾಧಿಕಾರಿ (ಎಸ್​ಪಿ) ಪಿ. ಅರವಿಂದನ್​ ಅವರು ಭಾನುವಾರ ತಮ್ಮ ಉಪ ಅಧಿಕಾರಿಯಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಒಂದು ತುರ್ತು ಕರೆಯನ್ನು ಸ್ವೀಕರಿಸುತ್ತಾರೆ. ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಕ್ಕೆ ಯುವತಿಯೊಬ್ಬಳು ಆಕೆಯ ಸೋದರಸಂಬಂಧಿ ಯುವಕನನ್ನು ಕೊಲೆ ಮಾಡಿರುವ ವಿಚಾರ ಎಸ್​ಪಿಗೆ ತಿಳಿಯುತ್ತದೆ. ಆದರೆ, ಈ ಪ್ರಕರಣದಲ್ಲಿ ಯುವತಿಯನ್ನು ಬಂಧಿಸದ ಪೊಲೀಸರು ಆಕೆಯನ್ನು ಬಿಟ್ಟು ಕಳುಹಿಸಿದ್ದಾರೆ. ಏಕೆಂದು ತಿಳಿಯಲು ಮುಂದೆ ಓದಿ…

    ಘಟನೆಯ ವಿವರಣೆಗೆ ಬರುವುದಾದರೆ, ಯುವತಿಯು ಪ್ರಕೃತಿ ಕರೆಗಾಗಿ ತಮ್ಮ ಮನೆ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿದಾಗ, ಆಕೆಯ ಸೋದರಸಂಬಂಧಿ ದಾಳಿ ಮಾಡುತ್ತಾನೆ. ಯುವತಿ ಬರುವುದನ್ನೇ ಕಾದು ಕುಳಿತಿದ್ದ ಆರೋಪಿ ಆಕೆ ಬಂದೊಡನೆ ಏಕಾಏಕಿ ಆಕೆಯ ಮೇಲೆ ಬಿದ್ದು, ಚಾಕುವಿನಿಂದ ಬೆದರಿಸಿ ಅತ್ಯಾಚಾರ ಎಸಗಲು ಯತ್ನಿಸುತ್ತಾನೆ. ಆದರೆ, ಆತ ಪಾನಮತ್ತನಾಗಿದ್ದನ್ನು ಗಮನಿಸಿದ ಯುವತಿ ತಕ್ಷಣ ಆತನನ್ನು ನೂಕುತ್ತಾಳೆ. ಈ ವೇಳೆ ಆತ ಹಿಡಿದಿದ್ದ ಚಾಕು ನೆಲದ ಮೇಲೆ ಬೀಳುತ್ತದೆ. ತಕ್ಷಣ ಅದನ್ನು ಕಸಿದುಕೊಳ್ಳುವ ಯುವತಿ ದಾಳಿಕೋರನ ಮೇಲೆ ಪ್ರತಿದಾಳಿ ಮಾಡಿ ಆತನ ಕುತ್ತಿಗೆ ಮತ್ತು ಮುಖಕ್ಕೆ ಇರಿಯುತ್ತಾಳೆ. ಬಳಿಕ ನಡೆದ ಘಟನೆಯನ್ನು ತಿಳಿಸಲು ಪೊಲೀಸ್​ ಠಾಣೆಗೆ ಓಡಿ ಬರುತ್ತಾಳೆ.

    ಇದನ್ನೂ ಓದಿರಿ: ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    ಠಾಣೆಗೆ ಬರುವ ಯುವತಿ ಏನು ನಡೆಯಿತು ಎಂಬುದನ್ನ ಹೇಳಿದಾಗ ಒಮ್ಮೆ ಪೊಲೀಸ್​ ಅಧಿಕಾರಿಗಳಿಗೆ ಶಾಕ್​ ಆಗುತ್ತದೆ. ಯಾವುದೇ ಭಯವಿಲ್ಲದೆ, ಹಿಂಜರಿಕೆಯಿಲ್ಲದೆ ತನ್ನ ಹೇಳಿಕೆಯನ್ನು ಪೊಲೀಸರ ಮುಂದೆ ದಾಖಲಿಸಿದಳು ಎಂದು ಎಸ್​ಪಿ ಅರವಿಂದನ್​ ಹೇಳಿದ್ದಾರೆ. ಅಲ್ಲದೆ, ಸೋದರಸಂಬಂಧಿ ಕೆಲವು ತಿಂಗಳ ಹಿಂದೆಯು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದನಂತೆ. ಇದನ್ನು ಆಕೆ ತನ್ನ ತಾಯಿಗೆ ತಿಳಿಸಿದ್ದಳಂತೆ. ಇದೇ ವಿಚಾರಕ್ಕೆ ಜಗಳ ನಡೆದು ಆತನಿಗೆ ಯುವತಿ ಕುಟುಂಬ ಎಚ್ಚರಿಕೆಯನ್ನು ನೀಡಿತ್ತು. ಆದರೆ, ಭಾನುವಾರ ನಡೆದಿದ್ದೇ ಬೇರೆ ಎನ್ನುತ್ತಾರೆ ಎಸ್​ಪಿ.

    ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!

    ಇನ್ನು ಈ ಘಟನೆ ತಿರುವಳ್ಳೂರ್​ ಜಿಲ್ಲೆಯ ಶೊಲವರಮ್​ ಏರಿಯಾದಲ್ಲಿ ನಡೆದಿದೆ. ಯುವತಿಯ ದೂರು ಸ್ವೀಕರಿಸಿದ ಸ್ಥಳೀಯ ಠಾಣಾ ಪೊಲೀಸರು ತಕ್ಷಣ ಪ್ರಕರಣವನ್ನು ಪೊನ್ನೇರಿಯ ಉಪ ಪೊಲೀಸ್​ ವರಿಷ್ಠಾಧಿಕಾರಿ ಕಲ್ಪನಾ ದತ್​ಗೆ ಮಾಹಿತಿ ನೀಡುತ್ತಾರೆ. ಇದರ ಬೆನ್ನಲ್ಲೇ ಕಲ್ಪನಾ ಅವರು ನನಗೆ ಕರೆ ಮಾಡಿ ಮಾಹಿತಿ ನೀಡಿದರು. ನಾನು ಪ್ರಾಸಿಕ್ಯೂಷನ್ ಉಪ ನಿರ್ದೇಶಕರಿಗೆ ಕರೆ ಮಾಡಿ ತಿಳಿಸಿದೆ. ಈ ವೇಳೆ ಸೆಕ್ಷನ್​ 100 ಸಾಮಾನ್ಯ ವಿನಾಯಿತಿಗಳ ಅಡಿಯಲ್ಲಿ ಬರುತ್ತದೆ ಎಂದು ಗೊತ್ತಾಯಿತು ಮತ್ತು ಆತ್ಮ ರಕ್ಷಣೆ ಪ್ರಕರಣಗಳಲ್ಲಿ ಇದನ್ನು ಅನ್ವಯಿಸಬಹುದು ಎಂದು ತಿಳಿಯಿತು. ಆದರೆ ಎಫ್‌ಐಆರ್ ಸಲ್ಲಿಸುವ ಪ್ರಕ್ರಿಯೆ ಏನೆಂದು ನಾವು ಅರ್ಥಮಾಡಿಕೊಳ್ಳಬೇಕಾಗಿತ್ತು ಎಂದು ಅರವಿಂದನ್​ ಹೇಳಿದರು.

    ಇದನ್ನೂ ಓದಿ: ಮರ್ಡರ್ ಆದ ವೆಲ್ಡರ್​: ರಾತ್ರಿ ಮನೆಯಲ್ಲೇ ಇದ್ದ, ಬೆಳಗ್ಗೆ ತೋಟದಲ್ಲಿ ಹೆಣವಾಗಿ ಬಿದ್ದಿದ್ದ..!

    ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 100 ಅನ್ನು ಆತ್ಮ ರಕ್ಷಣೆ ಮಾಡಿಕೊಳ್ಳುವಾಗ (ಅತ್ಯಾಚಾರ ಮತ್ತು ಕೊಲೆಯಿಂದ ತಪ್ಪಿಸಿಕೊಳ್ಳಲು) ಸಾವು ಸಂಭವಿಸಿದರೆ, ಅಂತಹ ಪ್ರಕರಣಗಳಲ್ಲಿ ಅನ್ವಯಿಸಬಹುದು. ಇದರಡಿಯಲ್ಲಿ ಕೃತ್ಯ ಎಸಗಿದ ವ್ಯಕ್ತಿಯನ್ನು ಕೊಲೆಯ ವಿಚಾರಣೆ ನಡೆಸುವ ಅಗತ್ಯವಿಲ್ಲ. ಇಂತಹ ಪ್ರಕರಣಗಳಲ್ಲಿ ಬಂಧನಕ್ಕೂ ಸಹ ಅನುಮತಿ ಇಲ್ಲ ಎಂದು ಹೈಕೋರ್ಟ್ ಈ ಹಿಂದೆಯೇ ಹೇಳಿದೆ. ಹೀಗಾಗಿ ಇಂಥದ್ದೆ ಪ್ರಕರಣಗಳಲ್ಲಿ ಈ ಹಿಂದೆ ನಡೆದ ಕೆಲವು ತೀರ್ಮಾನಗಳನ್ನು ಗಮನಿಸಿದೆವು. ಮಾಜಿ ಎಸ್​ಪಿ ಅಸ್ರ ಗರ್ಗ್​ ಅವರು ಮದುರೈ ಎಸ್​ಪಿಯಾಗಿದ್ದಾಗ ನಿರ್ವಹಿಸಿದ ಪ್ರಕರಣವೊಂದರಲ್ಲಿ ಆತ್ಮ ರಕ್ಷಣೆಯನ್ನು ಅನ್ವಯಿಸಿದ್ದು ತಿಳಿಯಿತು ಎಂದು ಎಸ್​ಪಿ ಅರವಿಂದನ್​ ಹೇಳಿದರು.

    ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಲು ಮುಂದಾದ ಪತಿಯನ್ನು ಉಷಾ ರಾಣಿ ಎಂಬ 43 ವರ್ಷದ ಮಹಿಳೆ ಕೊಲೆ ಮಾಡಿದ ಪ್ರಕರಣವನ್ನು ಗಮನಿಸಿದೆವು. ಈ ಘಟನೆ 2012 ಫೆಬ್ರವರಿಯಲ್ಲಿ ನಡೆದಿತ್ತು. ಉಷಾರಾಣಿ ಕೆಲಸದಿಂದ ಮನೆಗೆ ಮರಳಿದಾಗ ಆಕೆ ಪತಿ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ. ತಡೆಯಲು ಹೋದ ಉಷಾ ರಾಣಿ ಅವರನ್ನು ಹಿಂದಕ್ಕೆ ನೂಕಿದ್ದ. ಇದರಿಂದ ಕೋಪಗೊಂಡ ಉಷಾ ರಾಣಿ ಮಗನ ಕ್ರಿಕೆಟ್​ ಬ್ಯಾಟ್​ ತೆಗೆದುಕೊಂಡು ಹೊಡೆದು ಸಾಯಿಸುತ್ತಾಳೆ. ಬಳಿಕ ಸ್ವತಃ ಶರಣಾಗುವ ಆಕೆ ನಡೆದ ಘಟನೆಯನ್ನು ವಿವರಿಸುತ್ತಾಳೆ. ಬಳಿಕ ಅಸ್ರಾ ಗಾರ್ಗ್​ ಅವರು ತಕ್ಷಣ ಸೆಕ್ಷನ್​ 100 ಅನ್ವಯಿಸುವಂತೆ ಮಾಡುತ್ತಾರೆ. ಇದರಿಂದಾಗಿ ಆಕೆ ಮ್ಯಾಜಿಸ್ಟ್ರೇಟ್​ ಮುಂದೆ ಹೇಳಿಕೆ ದಾಖಲಿಸುತ್ತಾಳೋ ಹೊರತು ಪ್ರಕರಣದಲ್ಲಿ ನ್ಯಾಯಾಲಯದ ಮೆಟ್ಟಿಲನ್ನು ಏರದೆ ಬಿಡುಗಡೆಯಾಗುತ್ತಾಳೆ.

    ಇದನ್ನೂ ಓದಿರಿ: ಮಗಳು ದೊಡ್ಡವಳಾಗಿದ್ದಾಳೆ, ಅವಳ ಆರೈಕೆ ಹೇಗೆ ಮಾಡುವುದು? ತಿಂಡಿ ಯಾವುದು ಕೊಡಬೇಕು?

    ಇದೀಗ ಇದೇ ಸೆಕ್ಷನ್​ ಅನ್ನು ತಿರುವಳ್ಳೂರ್​ ಯುವತಿಗೆ ಅನ್ವಯಿಸಲು ಎಸ್​ಪಿ ಅರವಿಂದನ್​ ಮುಂದಾಗಿದ್ದು, ಅದರ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ಯುವತಿಗೆ ನ್ಯಾಯಾಲಯ ನೋಟಿಸ್​ ನೀಡುತ್ತದೆ ಎಂದು ಎಸ್​ಪಿ ಅರವಿಂದನ್​ ಹೇಳಿದ್ದಾರೆ. ಮುಂದುವರಿದು ಮಾಧ್ಯಮಗಳ ವರದಿಯಿಂದ ಈ ಹಿಂದೆ ನಡೆದ ಪ್ರಕರಣಗಳ ಬಗ್ಗೆ ತಿಳಿದಿದ್ದೇನೆ. ಇದೇ ರೀತಿಯ ಪ್ರಕರಣವನ್ನು ನಿಭಾಯಿಸಬೇಕಾದ ಯಾವುದೇ ಅಧಿಕಾರಿ, ಬದುಕುಳಿದವರಿಗೆ ಯಾವ ಆಯ್ಕೆಗಳನ್ನು ನೀಡಬಹುದು ಎಂಬುದನ್ನು ತಕ್ಷಣ ನೋಡಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    ನೈಟ್​ ಶಿಫ್ಟ್​ ಎಂದು ಮನೆ ಬಿಡ್ತಿದ್ದ ಗಂಡನನ್ನು ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್: ನೊಂದು ಆತ್ಮಹತ್ಯೆಗೆ ಶರಣು! ​

    ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​

    1.5 ಕೋಟಿ ರೂ.ಗೆ ವಿವಾಹಿತ ಬಾಯ್​ಫ್ರೆಂಡ್​ ಖರೀದಿಸಿದ ಮಹಿಳೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts