ಮೇಲ್ಮನೆ 4 ಕ್ಷೇತ್ರಕ್ಕೆ ಮತದಾನ ಆರಂಭ: ಅಖಾಡದಲ್ಲಿ ಒಟ್ಟು 49 ಮಂದಿ

vote
Published on

ಬೆಂಗಳೂರು: ವಿಧಾನ ಪರಿಷತ್ತಿನ 2 ಶಿಕ್ಷಕರ ಕ್ಷೇತ್ರ ಹಾಗೂ 2 ಪದವೀಧರರ ಕ್ಷೇತ್ರಗಳಿಗೆ ಸೋಮವಾರ ಬೆಳಗ್ಗೆ 8ಕ್ಕೆ ಮತದಾನ ಆರಂಭವಾಗಿದೆ.

ಪಕ್ಷಗಳ ಅಧಿಕೃತ ಅಭ್ಯರ್ಥಿಗಳು: ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ನಿರಾಣಿ ಹಣಮಂತ ರುದ್ರಪ್ಪ, ಕಾಂಗ್ರೆಸ್​ನಿಂದ ಸುನೀಲ್​ ಅಣ್ಣಪ್ಪ ಸಂಕ ಅಖಾಡಕ್ಕಿಳಿದಿದ್ದಾರೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ ಶಹಾಪೂರ, ಕಾಂಗ್ರೆಸ್​ನಿಂದ ಪ್ರಕಾಶ್​ ಬಾಬಣ್ಣ ಹುಕ್ಕೇರಿ, ಜೆಡಿಎಸ್​ ಅಭ್ಯರ್ಥಿಯಾಗಿ ಚಂದ್ರಶೇಖರ ಲೋಣಿ ಸ್ಪರ್ಧಿಸಿದ್ದಾರೆ.

ಇನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯ ಬಸವರಾಜ ಹೊರಟ್ಟಿ, ಕಾಂಗ್ರೆಸ್​ನ ಬಸವರಾಜ ಗುರಿಕಾರ, ಜೆಡಿಎಸ್​ನ ಶ್ರೀಶೈಲ ಗಡದಿನ್ನಿ ಸ್ಪರ್ಧಿಸಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯ ಮೈ.ವಿ. ರವಿಶಂಕರ್, ಕಾಂಗ್ರೆಸ್​ನ ಮಧು ಮಾದೇಗೌಡ, ಜೆಡಿಎಸ್​ನ ಎಚ್​.ಕೆ. ರಾಮು ಸ್ಪರ್ಧಿಸಿದ್ದಾರೆ. ಒಟ್ಟು ಈ ನಾಲ್ಕು ಕ್ಷೇತ್ರಕ್ಕ 49 ಮಂದಿ ಸ್ಪರ್ಧಿಸಿದ್ದಾರೆ.

ಬೆಳಗ್ಗೆ 8ಕ್ಕೆ ಆರಂಭವಾದ ಮತದಾನ ಬಿರುಸಿನಿಂದ ಸಾಗುತ್ತಿದೆ. ಸಂಜೆ 5ಕ್ಕೆ ಮತದಾನ ಮುಗಿಲಿದ್ದು, ಜೂನ್​ 15 ರಂದು ಮತ ಎಣಿಕೆ ನಡೆಯಲಿದೆ. ವಾಯವ್ಯ ಪದವೀಧರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ನಡೆಯಲಿದೆ. ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್​ಮೆಂಟ್​ ಕಾಲೇಜಿನಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net