ಟ್ಯಾಂಕರ್​-ಕಾರು ನಡುವೆ ಭೀಕರ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾವು

accident
Published on

ಕಲಬುರಗಿ: ಟ್ಯಾಂಕರ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಕೋಟನೂರು ಬಳಿ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ.

ರಾಹುಲ್ (25), ಖಾಸಿಂ (26), ಉಲ್ಲಾಸ್ (26) ಸೇರಿದಂತೆ ನಾಲ್ವರು ಮೃತ ದುರ್ದೈವಿಗಳು. ಮತ್ತೊಬ್ಬ ಮೃತನ ಗುರುತು ಪತ್ತೆಯಾಗಿಲ್ಲ. ಮೃತರೆಲ್ಲರೂ ಕಲಬುರಗಿ ನಗರದ ನಿವಾಸಿಗಳು.

ಇವರೆಲ್ಲರೂ ಸೋಮವಾರ ತಡರಾತ್ರಿ ಜೇವರ್ಗಿ ಮಾರ್ಗದಿಂದ ಕಲಬುರಗಿ ನಗರಕ್ಕೆ ಕಾರಿನಲ್ಲಿ ಬರುತ್ತಿದ್ದರು. ಕಲಬುರಗಿ ನಗರದಿಂದ ಜೇವರ್ಗಿ ಕಡೆಗೆ ಟ್ಯಾಂಕರ್ ಹೋಗುತ್ತಿತ್ತು. ಕಲಬುರಗಿಯ ಕೋಟನೂರು ಬಳಿ ಕಾರು ಮತ್ತು ಟ್ಯಾಂಕರ್​ ನಡುವೆ ಅಪಘಾತ ಸಂಭವಿಸಿದೆ. ಕಲಬುರಗಿ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net