ರಾಜ್ಯಾದ್ಯಂತ ಡಿ.28 ರಿಂದ ನೈಟ್​ ಕರ್ಫ್ಯೂ ಜಾರಿ: ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

ರಾಜ್ಯಾದ್ಯಂತ ಡಿ.28 ರಿಂದ ನೈಟ್​ ಕರ್ಫ್ಯೂ ಜಾರಿ: ಏನಿರುತ್ತೆ, ಏನಿರಲ್ಲ? #DrKSudhakar #CMbommai #Nightcurfew - youtube
Published on

ಬೆಂಗಳೂರು: ಡಿ. 28ರಿಂದ 10 ದಿನ ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಜಾರಿ ಮಾಡುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​, ಕರೊನಾ ಮತ್ತು ಒಮಿಕ್ರಾನ್​ ಹರಡುವಿಕೆ ತಡೆ ಹಿನ್ನೆಲೆ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರವನ್ನ ಘೋಷಣೆ ಮಾಡಿದರು. ಡಿಸೆಂಬರ್​ 28ರಿಂದ 10 ದಿನಗಳ ಕಾಲ ಅಂದ್ರೆ ಜನವರಿ 6ರ ವರೆಗೆ ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಜಾರಿಗೆ ತರಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಇರಲಿದೆ ಎಂದರು.

ಬಾರ್​, ಪಬ್​, ಕ್ಲಬ್​, ರೆಸಾರ್ಟ್​ಗಳಿಗೂ 50:50 ರೂಲ್ಸ್​ ಅನ್ವಯ. ರಾತ್ರಿ 10 ಗಂಟೆ ನಂತರ ಬಾರ್​, ಪಬ್​, ಕ್ಲಬ್​ ಬಂದ್​ ಆಗಲಿವೆ. ಹೊಸ ವರ್ಷದಲ್ಲಿ ರಸ್ತೆಗಳಲ್ಲಿ ಕಿಕ್ಕೇರಿಸಿಕೊಳ್ಳಲು ಅವಕಾಶವಿಲ್ಲ. ಎಂಜಿ ರಸ್ತೆ, ಬ್ರಿಗೇಡ್​ ರೋಡ್​ನಲ್ಲಿ ಹೊಸ ವರ್ಷ ಆಚರಣೆ ಮಾಡುವಂತಿಲ್ಲ. ಯಾವುದೇ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಯಾವುದೇ ಪಾರ್ಟಿಗೆ ಅವಕಾಶ ಇಲ್ಲ. ಇನ್ನು ರಾತ್ರಿ 10 ಗಂಟೆ ಬಳಿಕ ತುರ್ತು ಸಂದರ್ಭ ಹೊರತು ಜನ ಹೊರ ಬರುವಂತಿಲ್ಲ. ಅನಗತ್ಯವಾಗಿ ಓಡಾಡುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net