ವಿವಿಧ ಸಂಘಟನೆಗಳ ಸದಸ್ಯರ ವಿರುದ್ಧದ 35 ಕ್ರಿಮಿನಲ್​ ಕೇಸ್​ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ಅಸ್ತು

Vidhana Soudha vvani
Published on

ಬೆಂಗಳೂರು: ಹಲವು ಸಂಘಟನೆಗಳ ಸದಸ್ಯರ ವಿರುದ್ಧ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 35 ಕ್ರಿಮಿನಲ್​ ಮೊಕದ್ದಮೆಗಳನ್ನು ವಾಪಸ್​ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯು 35 ಕ್ರಿಮಿನಲ್​ ಕೇಸ್​ ಹಿಂಪಡೆಯುವ ಪ್ರಸ್ತಾವನೆಗೆ ಅಸ್ತು ಎಂದಿದೆ.

ಸಂಘ-ಪರಿವಾರ, ಕನ್ನಡಪರ, ರೈತಪರ ಸಂಘಟನೆಗಳ ಸದಸ್ಯರ ವಿರುದ್ಧ ವಿವಿಧ ಠಾಣೆಗಳಲ್ಲಿ ಹೂಡಿರುವ ದಾವೆಗಳನ್ನು ಕೈಬಿಡಲು ಸಚಿವ ಸಂಪುಟದ ಉಪ ಸಮಿತಿ ತೀರ್ಮಾನಿಸಿ, ಶಿಫಾರಸು ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net