ಕೊಟ್ಟ ಸಾಲ ವಾಪಸ್​ ಕೇಳಿದ ಮಹಿಳೆಗೆ ಗುಂಡಿಕ್ಕಿ ಹತ್ಯೆ: ಸಂಕೇಶ್ವರ ಪುರಸಭೆ ಬಿಜೆಪಿ ಸದಸ್ಯ ಬಂಧನ

murder case accused
Published on

ಬೆಳಗಾವಿ: ಸಾಲವಾಗಿ ಕೊಟ್ಟ ಹಣವನ್ನು ವಾಪಸ್​ ಕೊಡಿ ಎಂದ ಮಹಿಳೆಯನ್ನು ಗುಂಡಿಕ್ಕಿ ಕೊಂದ ಆರೋಪಿ, ಪುರಸಭೆ ಸದಸ್ಯ ಉಮೇಶ ಕಾಂಬಳೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಶೈಲಾ ಸುಬೇದಾರ್ ಬಡ್ಡಿ ವ್ಯವಹಾರ ಮಾಡಿಕೊಂಡು ಸಂಕೇಶ್ವರದಲ್ಲಿ ನೆಲೆಸಿದ್ದಳು. ಜ.16ರಂದು ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಈಕೆಯನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದರು. ಮಿಂಚಿನ ಕಾರ್ಯಾಚರಣೆ ನಡೆಸಿದ ಸಂಕೇಶ್ವರ ಠಾಣೆ ಪೊಲೀಸರು ಸಂಕೇಶ್ವರದ 14ನೇ ಸದಸ್ಯ ಉಮೇಶ ಕಾಂಬಳೆ ಎಂಬಾತನನ್ನು ಬಂಧಿಸಿದ್ದಾರೆ.

ಶೈಲಾ ಸುಬೇದಾರ್ ಬಳಿ ಉಮೇಶ ಕಾಂಬಳೆ 25 ಲಕ್ಷ ರೂ. ಪಡೆದಿದ್ದ. ಬಡ್ಡಿ ಸಮೇತ ಹಣ ವಾಪಸ್​ ಕೊಡುವಂತೆ ಉಮೇಶಗೆ ಶೈಲಾ ಕೇಳಿದ್ದರಂತೆ. ಇದಕ್ಕೆ ಸಿಟ್ಟಾದ ಉಮೇಶ ತನ್ನ ಸಹಚರರಿಬ್ಬರ ಜತೆ ಸೇರಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಮತ್ತಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net