ರೋಹಿಣಿ ಸಿಂಧೂರಿ- ಮನೀಶ್ ಮೌದ್ಗಿಲ್ ಇಬ್ಬರೂ ತುಂಬಾ ತುಂಬಾ ಹತ್ತಿರ... ಎನ್ನುತ್ತಲೇ ಸಾ.ರಾ.ಮಹೇಶ್ ಕಿಡಿ

RohiniSindhuri ManishMaudgil SaRaMahesh
Published on

ಮೈಸೂರು: ಒಂದಲ್ಲ ಒಂದು ಕಾರಣಕ್ಕೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಷ್ಟು ದಿನ ಕಿಡಿಕಾರಿದ್ದ ಶಾಸಕ ಸಾ.ರಾ.ಮಹೇಶ್, ಇದೀಗ ಮತ್ತೊಬ್ಬ ಅಧಿಕಾರಿ ಮನೀಶ್​ ಮೌದ್ಗಿಲ್ ವಿರುದ್ಧ ಸಿಡಿದೆದ್ದಿದ್ದಾರೆ. ರೋಹಿಣಿ ಮತ್ತು ಸಾ.ರಾ. ಮಹೇಶ್​ ನಡುವಿನ ಜಟಾಪಟಿ ಕೆಲ ತಿಂಗಲ ಹಿಂದೆ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಸಿಂಧೂರಿ ಮೈಸೂರಿಂದ ಬೇರೆಡೆಗೆ ವರ್ಗಾವಣೆ ಆದರೂ ಸಾ.ರಾ. ಮಹೇಶ್​ ಕೋಪ ಮಾತ್ರ ಕಡಿಮೆ ಆಗಿಯೇ ಇಲ್ಲ. ಬಟ್ಟೆ ಬ್ಯಾಗ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮವೆಸಗಿದ್ದಾರೆ ಎಂದು ಸಿಂಧೂರಿ ವಿರುದ್ಧ ನಿನ್ನೆಯಷ್ಟೇ ಗಂಭೀರ ಆರೋಪ ಮಾಡಿದ್ದ ಮಹೇಶ್, ಇಂದು ಮನೀಶ್​ ಮೌದ್ಗಿಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೆ.ಆರ್.ನಗರದಲ್ಲಿ ಸುದ್ದಿಗಾರರೊಂದಿಗೆ ಸಾ.ರಾ.ಮಹೇಶ್​ ಮಾತನಾಡುತ್ತಾ, ಮೈಸೂರು ಭೂ ಅಕ್ರಮ ಪ್ರಕರಣದ ಮರು ತನಿಖಾ ಆದೇಶಕ್ಕೆ ಕೆಂಡಾಮಂಡಲರಾದರು. 'ನೀನು ಸರ್ವೇ ಕಮಿಷನರ್ ಆದ ತಕ್ಷಣ ರಾಜ್ಯಕ್ಕೆ ಸುಪ್ರೀಮಾ? ತನಿಖೆ ಆದೇಶಕ್ಕೂ ಮುನ್ನ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯಬೇಕಿತ್ತು ಎಂದರು. ರೋಹಿಣಿ ಸಿಂಧೂರಿ ಮತ್ತು ಮನೀಶ್​ ಮೌದ್ಗಿಲ್ ಇಬ್ಬರೂ ತುಂಬಾ ತುಂಬಾ ಹತ್ತಿರ' ಎಂದು ಲೇವಡಿ ಮಾಡಿದರು.

'ನಾನು ಯಾವುದೇ ಭೂ ಒತ್ತುವರಿ ಮಾಡಿಲ್ಲ. ಈ ಹಿಂದೆ ತನಿಖೆ ಮಾಡಿ ಒತ್ತುವರಿ ಆಗಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ನಾನೀಗ ಭೂಮಿನ ಟ್ರ್ಯಾಲಿ ತೆಗೆದುಕೊಂಡು ಎಳೆದುಬಿಟ್ಟಿದ್ದೀನಾ?' ಎಂದು ತನಿಖಾ ಆದೇಶದ ವಿರುದ್ಧ ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net