

ಹೆಬ್ರಿ: ಉಡುಪಿ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಪ್ರಶಾಂತ್ ರಾವ್ ಇತ್ತೀಚೆಗೆ ಹೆಬ್ರಿ ಗ್ರಾಪಂಗೆ ಆಗಮಿಸಿದ್ದು, ಆಯ್ದ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಕಲೀಲು ರಸ್ತೆಯ ಕಾಂಕ್ರೀಟ್ ಕಾಮಗಾರಿ, ರಾಗಿ ಹಕ್ಲು ಕೃಷ್ಣಯ್ಯ ಆಚಾರ್ಯ ಅವರ ಬಾವಿ ರಕ್ಷಣೆಯ ಕಾಮಗಾರಿ ಪರಿಶೀಲಿಸಿದರು. ಗ್ರಾಪಂ ಅಧ್ಯಕ್ಷ ತಾರಾನಾಥ್ ಎಸ್ ಬಂಗೇರ, ಪಿಡಿಒ ಸದಾಶಿವ ಸೆರ್ವೆಗಾರ್, ಇಂಜಿನಿಯರ್ ಮಧು, ಮುದ್ರಾಡಿ ಗ್ರಾಪಂ ಸಿಬ್ಬಂದಿ ಪದ್ಮನಾಭ ಕುಲಾಲ್ ಇದ್ದರು.