ಭಾರತೀಯ ಉಡುಗೆ ತೊಟ್ಟು ಬರುವವರಿಗೆ ಒಳಗೆ ಬರುವುದಕ್ಕೆ ಅನುಮತಿಯಿಲ್ಲ ಎಂದ ರೆಸ್ಟೋರೆಂಟ್​!

ದ್
Published on

ನವದೆಹಲಿ: ಸೀರೆ ಭಾರತೀಯ ಸಂಪ್ರದಾಯದ ಉಡುಗೆ. ದೇಶ ಮಾತ್ರವಲ್ಲದೆ ವಿದೇಶಿ ಹೆಣ್ಣು ಮಕ್ಕಳೂ ಸಹ ಸಂತಸದಿಂದ ತೊಡುವ ಸೀರೆಯನ್ನು ಉಟ್ಟು ಹೋಗಿದ್ದಕ್ಕೆ ರೆಸ್ಟೋರೆಂಟ್​ನಲ್ಲಿ ರೂಂ ಕೊಡಲು ನಿರಾಕರಿಸುವ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಸಿದ್ಧ ಕೈಲಿನ್​ ಮತ್ತು ಐವಿ ರೆಸ್ಟೋರೆಂಟ್​ನಲ್ಲಿ ಸೀರೆ ಉಟ್ಟ ಮಹಿಳೆಗೆ ನೀವು ಸೀರೆ ಉಟ್ಟು ಬಂದಿರುವುದರಿಂದ ನಿಮಗೆ ರೂಂ ಕೊಡಲಾಗುವುದಿಲ್ಲ ಎಂದಿರುವ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.

ಗುರುಗಾಂವ್​ನ ಪಾಥ್​ವೇಸ್​ ಸೀನಿಯರ್​ ಸ್ಕೂಲ್​ನ ಪ್ರಾಂಶುಪಾಲಕಿಯಾಗಿರುವ ಸಂಗೀತ ಕೆ. ನಾಗ್​ ಮಾರ್ಚ್​ 10ರಂದು ಕೈಲಿನ್​ ಮತ್ತು ಐವಿ ರೆಸ್ಟೋರೆಂಟ್​ಗೆ ತೆರಳಿದ್ದಾರೆ. ಆದರೆ ಆಕೆಯನ್ನು ರೆಸ್ಟೋರೆಂಟ್​ನಲ್ಲಿ ತಡೆಯಲಾಗಿದೆ. ನೀವು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿರುವ ಕಾರಣ ನಿಮಗೆ ಇಲ್ಲಿ ಅನುಮತಿ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ತಡೆದಿದ್ದಾನೆ. ಇದನ್ನು ವಿಡಿಯೋ ಮಾಡಲಾಗಿದ್ದು ಸಂಗೀತ ಅವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಾಂಪ್ರದಾಯಿಕೆ ಉಡುಗೆ ಎಂಬ ಕಾರಣಕ್ಕೆ ನಿರಾಕರಿಸಿದ್ದಾರೆ. ಭಾರತದಲ್ಲಿರುವ ರೆಸ್ಟೋರೆಂಟ್​ಗಳಲ್ಲಿ ಸ್ಮಾರ್ಟ್​ ಕ್ಯಾಶುಯಲ್​ಗಳನ್ನು ಅನುಮತಿಸಲಾಗುತ್ತದೆ ಆದರೆ ಭಾರತೀಯ ಉಡುಗೆಯನ್ನಲ್ಲ! ಭಾರತೀಯನೆಂದು ಹೆಮ್ಮೆ ಪಡಲು ಏನುಳಿದಿದೆ? ಎಂದು ಟ್ವೀಟ್​ನಲ್ಲಿ ಅವರು ಪ್ರಶ್ನಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತಿದ್ದಂತೆ ಎಚ್ಚೆತ್ತುಕೊಂಡ ಕೈಲಿನ್​ ಮತ್ತು ಐವಿ ರೆಸ್ಟೋರೆಂಟ್​ನ ನಿರ್ದೇಶಕ ಸೌರಭ್​ ಖನಿಜೋ, ತಮ್ಮ ರೆಸ್ಟೋರೆಂಟ್​ನ ಸಿಬ್ಬಂದಿಯ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಇದು ಆತನ ತಪ್ಪು ಗ್ರಹಿಕೆಯಷ್ಟೇ, ನಮ್ಮಲ್ಲಿ ಭಾರತೀಯ ಉಡುಗೆ ನಿಷಿದ್ಧ ಎನ್ನುವುದಿಲ್ಲ. ನಾವು ಸ್ಲಿಪ್ಪರ್​ ಮತ್ತು ಶಾರ್ಟ್ಸ್​ ತೊಟ್ಟವರಿಗೆ ಒಳಗೆ ಅನುಮತಿ ನೀಡುವುದಿಲ್ಲವಷ್ಟೇ. ಅದನ್ನು ರೆಸ್ಟೋರೆಂಟ್​ನ ಗೇಟ್​ನಲ್ಲೇ ಹಾಕಿದ್ದೇವೆ. ನಮ್ಮ ಸಿಬ್ಬಂದಿ ಮಾಡಿರುವ ತಪ್ಪಿಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಸಂಗೀತಾ ಅವರಿಗೆ ಈ ರೀತಿಯ ಕ್ಷಮಾಪಣಾ ಸಂದೇಶವನ್ನು ಅವರು ಕಳಿಸಿದ್ದನ್ನು ಸಂಗೀತಾ ಅವರು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಚಾರವಾಗಿ ಕಾಂಗ್ರೆಸ್​ನ ಶರ್ಮಿಸ್ತಾ ಮುಖರ್ಜಿ ಕೂಡ ಟ್ವೀಟ್​ ಮಾಡಿದ್ದು, "ಕೈಲಿನ್​ ಮತ್ತು ಐವಿ ಅಥವಾ ಇನ್ನಾವುದೇ ರೆಸ್ಟೋರೆಂಟ್​ನಲ್ಲಿ ಭಾರತೀಯ ಉಡುಗೆ ಧರಿಸಲು ಅತಿಥಿಗಳಿಗೆ ಅವಕಾಶ ನೀಡದಂತಹ ವಸಾಹತುಶಾಹಿ ಪದ್ಧತಿಯನ್ನು ಅನುಸರಿಸಿದ್ದೇ ಆದಲ್ಲಿ ಅವರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು" ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ರ ಬಳಿ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net