

ರಾಮನಗರ: ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನ ದುಷ್ಕರ್ಮಿಗಳ ತಂಡ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ.
ಕುಮಾರ(35) ಕೊಲೆಯಾದ ದುರ್ದೈವಿ. ಕಳೆದ ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಬಿಡದಿಯ ಬಿ.ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಕುಮಾರ್ ಆಯ್ಕೆಯಾಗಿದ್ದರು.
ಇಂದು(ಮಂಗಳವಾರ) ಮಧ್ಯಾಹ್ನ ಬಿಡದಿ ಹೋಬಳಿ ಹೆಜ್ಜಾಲ ಬಳಿಯ ರಚನಾ ಲಿಕ್ಕರ್ ಶಾಪ್ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕುಮಾರ್ನನ್ನು ಮನಸೋಇಚ್ಛೆ ಹಲ್ಲೆ ಮಾಡಿ ಕೊಂದಿದ್ದಾರೆ. ಜಮೀನು ವಿಚಾರ ಇಲ್ಲವೇ ಹಳೇ ವೈಷಮ್ಯದ ಹಿನ್ನೆಲೆ ಸಂಬಂಧಿಕರಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.