ತೋಟದಲ್ಲಿ ಪಂಪ್​ಸೆಟ್​ ಕದಿಯಲು ಬಂದ ಶಂಕೆಯಲ್ಲಿ ದಲಿತ ಯುವಕರಿಬ್ಬರ ಹತ್ಯೆ: 13 ಮಂದಿ ಬಂಧನ

gubbi death case
Published on

ತುಮಕೂರು: ಪೆದ್ದನಹಳ್ಳಿಯಲ್ಲಿ ನಡೆದಿದ್ದ ದಲಿತ ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್​, ಸಂಗಮೇಶ್​, ಕೂಡಲಯ್ಯ ಸೇರಿ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗುಬ್ಬಿ ತಾಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿಯಲ್ಲಿ ಗುರುವಾರ ರಾತ್ರಿ ತೋಟದಲ್ಲಿ ಪಂಪ್​ಸೆಟ್​ ಕದಿಯಲು ಬಂದಿದ್ದರೆಂಬ ಶಂಕೆಯಲ್ಲಿ ರಾತ್ರೋರಾತ್ರಿ ಪಿ.ಎಂ.ಗಿರೀಶ್​ (30), ಮಂಚಲದೊರೆಯ ಗಿರೀಶ್​ (25) ಎಂಬುವರನ್ನು ಹಿಗ್ಗಾಮುಗ್ಗ ಥಳಿಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ನಂದೀಶ್​ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಶಿರಾ ಡಿವೈಎಸ್ಪಿ ಕುಮಾರಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಪ್ರಕರಣ ಬೆಳಕಿಗೆ ಬಂದ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೆದ್ದನಹಳ್ಳಿಯ ದಲಿತ ಯುವಕರಿಬ್ಬರ ಕೊಲೆ ನನ್ನ ಹೃದಯ ಕಲಕಿದೆ. ದಲಿತರ ಸಾವು ದಲಿತರೆಡೆಗಿನ ಬಿಜೆಪಿ ನಿರಾಸಕ್ತಿ ತೋರುತ್ತಿದೆ. ರಾಜ್ಯ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅಸಮರ್ಥರು. ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ. ಹತ್ಯೇಗಿಡಾದ ಕುಟುಂಬದವರಿಗೆ ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net