ಪಿಯು ಸೈನ್ಸ್ ಕಾಲೇಜು ಉಪನ್ಯಾಸಕ ಮಾರ್ಗಮಧ್ಯೆ ದುರಂತ ಅಂತ್ಯ: ಸಾವಿನ ಸುತ್ತ ಅನುಮಾನದ ಹುತ್ತ

New Project (39)
Published on

ವಿಜಯಪುರ: ಪಿಯು ಸೈನ್ಸ್ ಕಾಲೇಜಿನ ಉಪನ್ಯಾಸಕರೊಬ್ಬರು ತರಗತಿ ಮುಗಿಸಿಕೊಂಡು ವಾಪಸ್​ ಮನೆಗೆ ಹೋಗುವ ಮಾರ್ಗಮಧ್ಯೆ ದುರಂತ ಅಂತ್ಯಕಂಡಿದ್ದು, ಸಾವಿನ ಸುತ್ತ ಅನುಮಾನ ಹುತ್ತ ಬೆಳೆದಿದೆ.

ತಾಳಿಕೋಟಿಯ ಕಾಶೀನಾಥ ಪುರಾಣಿಕಮಠ(27) ಮೃತರು. ಇವರು ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಎಕ್ಸ್​ಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಎಂದಿನಂತೆ ನಿನ್ನೆ(ಶುಕ್ರವಾರ) ಕಾಲೇಜಿಗೆ ಹೋಗಿದ್ದರು. ವಾಪಸ್​ ಮನೆಗೆ ಬೈಕ್​ನಲ್ಲಿ ಬರುವಾಗ ಮಾರ್ಗಮಧ್ಯೆ ಮಲಗಲದಿನ್ನಿ ಗ್ರಾಮದ ಬಳಿ ಮೃತಪಟ್ಟಿದ್ದಾರೆ.

ಮೇಲ್ನೋಟಕ್ಕೆ ಬೈಕ್​ ಅಪಘಾತವಾದಂತೆ ಕಂಡುಬಂದರೂ ಇದೊಂದು ಕೊಲೆ. ಅಪಘಾತ ಆಗಿದೆ ಎಂಬಂತೆ ಯಾರೋ ಕಿಡಿಗೇಡಿಗಳು ಬಿಂಬಿಸಲು ಯತ್ನಿಸಿದ್ದಾರೆ ಎಂದು ಮೃತ ಉಪನ್ಯಾಸಕನ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net