ಬೊಮ್ಮಾಯಿ ವಿರುದ್ಧ ಬಿಎಸ್​ವೈಗೆ ದೂರು! ಪ್ರೀತಂಗೌಡಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಹಾಲಿ-ಮಾಜಿ ಸಿಎಂ

preetam gowda bommai bsy
Published on

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಶಾಸಕ ಪ್ರೀತಂ ಗೌಡ ದೂರು ನೀಡಿದ್ದಾರೆ. ದೂರು ಹೊತ್ತು ತಂದ ಪ್ರೀತಂ ಗೌಡಗೆ ಹಾಲಿ ಮತ್ತು ಮಾಜಿ ಸಿಎಂ ಇಬ್ಬರೂ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.

ನಿಮ್ಮ ಜಿಲ್ಲೆಯ ಸಮಸ್ಯೆ ಇದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸು. ಅದನ್ನು ಬಿಟ್ಟು ಅಡ್ಜೆಸ್ಟ್​ಮೆಂಟ್ ರಾಜಕಾರಣ ಅಂತಲ್ಲಾ ಹೇಳುವುದು ಸರಿಯಲ್ಲ. ದೇವೇಗೌಡರನ್ನು ಸಿಎಂ ಭೇಟಿ ಆಗಿದ್ದರ ವಿರುದ್ಧ ಇನ್ನುಂದೆ ಬಹಿರಂಗ ಹೇಳಿಕೆ ನೀಡಬೇಡ ಎಂದು ಪ್ರೀತಂ ಗೌಡಗೆ ಬಿಎಸ್​ವೈತಿಳಿ ಹೇಳಿದರು.

ಇತ್ತ ಸಿಎಂ ಭೇಟಿ ವೇಳೆಯೂ ಪ್ರೀತಂ ಗೌಡಗೆ ಕ್ಲಾಸ್​ ಆಗಿದೆ. ಸಿಎಂ ಕಚೇರಿಯಲ್ಲಿ ಇಬ್ಬರು ಹಿರಿಯ ಸಚಿವರ ಜತೆ ಚರ್ಚೆ ನಡೆಸುತ್ತಾ ಬೊಮ್ಮಾಯಿ ಕುಳಿತಿದ್ದರು. ಈ ವೇಳೆ ಬಂದ ಪ್ರೀತಂಗೌಡಗೆ ಸಿಎಂ ತರಾಟೆಗೆ ತೆಗೆದುಕೊಂಡರು. ದೇವೇಗೌಡರನ್ನು ಭೇಟಿ ಮಾಡಿದ್ದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಡ್ಜೆಸ್ಟಮೆಂಟ್ ರಾಜಕಾರಣ ಎಂದರೆ ಏನು? ಸಿಎಂಗೆ ಈ ರೀತಿ ಹೇಳುವುದು ಸರಿಯೇ? ರಾಜಕಾರಣವೇ ಬೇರೆ, ವೈಯಕ್ತಿಕ ಸಂಬಂಧಗಳೇ ಬೇರೆ. ಅಷ್ಟಕ್ಕೂ ದೇವೇಗೌಡರು ಮಾಜಿ ಪ್ರಧಾನಿ, ರಾಜ್ಯದ ಹಿರಿಯ ರಾಜಕಾರಣಿ. ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಡೋದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದರು. ಸಿಎಂ ಗರಂ ಆಗಿದ್ದನ್ನು ಕಂಡ ಪ್ರೀತಂ, ಹೆಚ್ಚು ಮಾತನಾಡದೆ ಹೊರಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net