ಬೆಂಗಳೂರಲ್ಲಿ BASE ವಿವಿ ಕ್ಯಾಂಪಸ್​ ಉದ್ಘಾಟಿಸಿದ ಪ್ರಧಾನಿ ಮೋದಿ: 150 ಐಟಿಐಗಳ ಲೋಕಾರ್ಪಣೆ

modi
Published on

ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್​ ಬಳಿ ಇರುವ ಆವರಣದಲ್ಲಿರುವ ಡಾ.ಬಿ.ಆರ್​.ಅಂಬೇಡ್ಕರ್​ ಸ್ಕೂಲ್​ ಆಫ್​ ಎಕನಾಮಿಕ್ಸ್​ (ಬೇಸ್​) ವಿವಿ ಕ್ಯಾಂಪಸ್​ ಅನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಇದೇ ವೇಳೆ ಅಂಬೇಡ್ಕರ್​ರ ಪುತ್ಥಳಿಯನ್ನೂ ಪ್ರಧಾನಿ ಅನಾವರಣ ಮಾಡಿದರು. 201 ಕೋಟಿ ರೂ. ವೆಚ್ಚದಲ್ಲಿ ಬೇಸ್​ ವಿವಿಯ ನೂತನ ಕ್ಯಾಂಪಸ್​ ಅನ್ನು ನಿರ್ಮಿಸಲಾಗಿದೆ. ಮೇಲ್ದರ್ಜೆಗೇರಿಸಿದ 150 ಐಟಿಐ ಹಬ್​ಗಳನ್ನೂ ಲೋಕಾರ್ಪಣೆ ಮಾಡಿದರು. ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿರುವ ಐಟಿಐ ಹಬ್​ಗಳನ್ನು ಪ್ರಧಾನಿ ಅವರು ಖುದ್ದು ವೀಕ್ಷಿಸಿದರು. ಪ್ರತಿ ವರ್ಷ 1.2 ಲಕ್ಷ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ಪ್ರಧಾನಿ ಅವರಿಗೆ ಅಂಬೇಡ್ಕರ್ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಜ್ಯಪಾಲ ಥಾವರ್​ಚಂದ್ ಗೆಹಲೋತ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಅಶ್ವಥ್​ನಾರಾಯಣ್​, ವಿ. ಸೋಮಣ್ಣ, ಶ್ರೀರಾಮುಲು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net