

ರಾಮನಗರ: ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿಶಾಲ್ ಮಾರ್ಟ್ ಬಳಿ ಪ್ರೇಯಸಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಸೈಕೋ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿತ್ಯಶ್ರೀ ಹಾಗೂ ಗಿರೀಶ್ ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದು, ಬಳಿಕ ಭಿನ್ನಾಭಿಪ್ರಾಯ ಮೂಡಿ ಬೇರೆಯಾಗಿದ್ದರು. ಇತ್ತೀಚೆಗೆ ಗಿರೀಶ್ ನಿತ್ಯಶ್ರೀ ಮನೆ ಬಳಿಬಂದು ಮದುವೆಯಾಗು ಎಂದು ಕಾಡುತ್ತಿದ್ದ. ಆಕೆ ನಿರಾಕರಿಸುತ್ತಲೇ ಬಂದಿದ್ದಳು. ಈಗ ನಿತ್ಯಶ್ರೀಗೆ ಬೇರೆಯವನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇಂದು ಆಕೆ ಶಾಪಿಂಗ್ಗೆ ಹೋದಾಗ ಗಿರೀಶ್ ಮಚ್ಚಿನಿಂದ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಇದೀಗ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಗಾಣಕಲ್ ಪೆದ್ದಪ್ಪನಪಾಳ್ಯ ರಸ್ತೆಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಆತನ ಮೃತದೇಹ ರವಾನೆಯಾಗಿದೆ. ಪ್ರಕರಣ ದಾಖಲಾಗಿದೆ. (ದಿಗ್ವಿಜಯನ್ಯೂಸ್)