ಹೈದರಾಬಾದ್: ಬೆಂಗಳೂರು ಸಮೀಪದ ಫಾರ್ಮ್ ಹೌಸ್‌ನಲ್ಲಿ ಮೇ 15ರಂದು ಆಯೋಜಿಸಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿ ಹಲವು ಸೆಲೆಬ್ರಿಟಿಗಳು, ಮಾಡೆಲ್ಗಳನ್ನು ಬಂಧಿಸಿರುವುದು ಗೊತ್ತೇ ಇದೆ. ಈ ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ, ಫಾರ್ಮ್ ಹೌಸ್‌ನಲ್ಲಿ ನಾನು ಇರಲಿಲ್ಲ ಎಂದು ವಿಡಿಯೋ ಬಿಡುಗಡೆ ಮಾಡಿ ಎಲ್ಲರನ್ನೂ ನಂಬಿಸುವ ಪ್ರಯತ್ನ ಮಾಡಿದ್ದರು. ಆದರೆ, ಬೆಂಗಳೂರು ಪೊಲೀಸರು ಈಗಾಗಲೇ ನಟಿ ಹೇಮಾಗೆ ಸಂಬಂಧಿಸಿದ ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಈ ಪ್ರಕರಣದಲ್ಲಿ ತನ್ನ ಜೊತೆಗೆ 88 ಮಂದಿಯನ್ನು ಆರೋಪಿಗಳೆಂದು ಹೆಸರಿಸಿದ್ದನ್ನು ನೋಡಿ ಹೇಮಾ ಆಘಾತಕ್ಕೊಳಗಾಗಿದ್ದರು. ಇದೀಗ ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ರೋಚಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ ಅವರು ಇತ್ತೀಚೆಗೆ ನ್ಯಾಯಾಲಯಕ್ಕೆ 1086 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಅದರಲ್ಲಿ ನಟಿ ಹೇಮಾ ಎಂಡಿಎಂಎ ಸೇವಿಸಿದ್ದಾರೆ ಎನ್ನಲಾಗಿದೆ. ರಕ್ತದ ಮಾದರಿಗಳ ಫಲಿತಾಂಶಗಳನ್ನು ಲಗತ್ತಿಸಲಾಗಿದೆ.
ಮೇ 15ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ನಟಿ ಹೇಮಾ ಅವರು ಡ್ರಗ್ಸ್ ಸೇವಿಸಿರುವುದು ಕಂಡುಬಂದಿದೆ. ವೈದ್ಯಕೀಯ ಫಲಿತಾಂಶಗಳಲ್ಲಿ ಪಾಸಿಟಿವ್ ಕಂಡುಬಂದಾಗ ಅವರನ್ನು ಬಂಧಿಸಿ ಜೈಲಿಗೆ ಕರೆದೊಯ್ಯಲಾಯಿತು. ನಂತರ ನಟಿ ಹೇಮಾ ಜಾಮೀನಿನ ಮೇಲೆ ಹೊರಬಂದಿದ್ದರು. ನಟಿ ಹೇಮಾ ಅವರು ಸ್ನೇಹಿತರ ಆಹ್ವಾನದ ಮೇರೆಗೆ ರೇವ್ ಪಾರ್ಟಿಗೆ ಹೋಗಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ನಟಿ ಹೇಮಾ ಅವರೊಂದಿಗೆ ಪಾರ್ಟಿಗೆ ತೆರಳಿದ್ದ 79 ಮಂದಿಯನ್ನು ಆರೋಪಿಗಳೆಂದು ಹೆಸರಿಸಿರುವ ಪೊಲೀಸರು, ಪಾರ್ಟಿ ಆಯೋಜಿಸಿದ್ದ 9 ಜನರ ವಿರುದ್ಧ ಇತರೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎನ್‌ಡಿಪಿಎಸ್‌ನ ಸೆಕ್ಷನ್ 27ರ ಅಡಿಯಲ್ಲಿ ಹೇಮಾ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ.
ಜಾಮೀನಿನ ಮೇಲೆ ಹೊರಬಂದ ನಟಿ ಹೇಮಾ ತಾನು ನಿರಪರಾಧಿ ಎಂದು ಹೇಳಿಕೊಂಡು ಹಲವು ರೀತಿಯಲ್ಲಿ ಸುದ್ದಿ ಹಬ್ಬಿಸಿದ್ದರು. ಈ ಘಟನೆಯ ನಂತರ ನಟಿ ಹೇಮಾ ಮೇಲೆ ಟಾಲಿವುಡ್ ಕಲಾವಿದರ ಸಂಘ ನಿಷೇಧ ಹೇರಿತ್ತು. ಆ ನಿಷೇಧವನ್ನು ಇತ್ತೀಚೆಗೆ ತೆಗೆದುಹಾಕಲಾಗಿದೆ. ಎಲ್ಲ ಸಮಸ್ಯೆ ಮುಗಿಯಿತು ಅನ್ನುವಷ್ಟರಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಕೋರ್ಟ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ನಟಿ ಹೇಮಾ ಬಂಧನವಾಗುತ್ತಾ? ಅಥವಾ ಇಲ್ಲವಾ? ಎಂಬ ಚರ್ಚೆಗಳು ನಡೆಯುತ್ತಿವೆ.
ಇದೇ ವೇಳೆ ಚಾರ್ಜ್ಶೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ನಟಿ ಹೇಮಾ, ನಾನು ಎಲ್ಲಿಯೂ ಡ್ರಗ್ಸ್ ಸೇವಿಸಿಲ್ಲ. ಡ್ರಗ್ಸ್ ಸೇವಿಸಿರುವುದು ಸಾಬೀತಾದರೆ ಯಾವುದಕ್ಕೂ ನಾನು ಸಿದ್ಧ. ಚಾರ್ಜ್ಶೀಟ್ ನನ್ನ ಕೈಗೆ ಸಿಕ್ಕ ಬಳಿಕ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ನಾನು ಎಂಡಿಎಂಎ ಡ್ರಗ್ಸ್ ಅನ್ನು ಸೇವಿಸಿಯೇ ಇಲ್ಲ ಎಂದು ಹೇಮಾ ಹೇಳಿದ್ದಾರೆ. ಆದರೆ, ಚಾರ್ಜ್ಶೀಟ್ನಲ್ಲಿ ಸೇವಿಸಿದ್ದಾರೆ ಎಂದು ಉಲ್ಲೇಖವಾಗಿದೆ. ಈ ಪ್ರಕರಣ ಮತ್ತೆ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)
ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ
ಶಿಕ್ಷಣ, ಮಾಡೆಲಿಂಗ್ ಮತ್ತು… ಈ ಬ್ಯೂಟಿಫುಲ್ IPS ಅಧಿಕಾರಿಯ ಹಿಂದಿದೆ ಒಂದು ಮನಮಿಡಿಯುವ ಕತೆ!