ತಲೆ ಎತ್ತಿದೆ ಹೊಸ ದಂಧೆ, ಹುಷಾರ್! ಮಹಿಳೆಯರಿಗೆ ಲಿಫ್ಟ್​ ನೀಡುವವರು ಇರಬೇಕು ಇನ್ಮೇಲೆ ಎಚ್ಚರ.. | New Scam

blockquote class=twitter-tweetp lang=hi dir=ltrछेड
Published on

ಲಕ್ನೋ: ರಸ್ತೆಯಲ್ಲಿ ಯಾರಾದರೂ ಬೈಕ್​, ಕಾರು ಲಿಫ್ಟ್​ ಕೇಳಿದ್ರೆ ನೀವು ಏನು ಮಾಡುತ್ತೀರಾ? ಸ್ವಾಭಾವಿಕವಾಗಿ ಅವರಿಗೆ ಸಹಾಯ ಆಗುತ್ತದೆ ಎಂದು ಸಾಮಾನ್ಯವಾಗಿ ಲಿಫ್ಟ್ ಕೊಡುವುದು ಸಹಜ. ಆದರೆ, ಲಕ್ನೋ ನಗರದಲ್ಲಿ ಮಹಿಳೆಗೆ ಲಿಫ್ಟ್ ಕೊಟ್ಟ ಯುವಕನ ಪರಿಸ್ಥಿತಿ ಹೀನಾಯವಾಗಿದೆ.

ಹೌದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ವಿಭಿನ್ನ ರೀತಿಯಲ್ಲಿ ಕಳ್ಳತನ ಮಾಡುವ ಹೊಸ ದಂಧೆ(New Scam) ಹುಟ್ಟಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಲಕ್ನೋದ ವ್ಯಕ್ತಿಯೊಬ್ಬ ವೀಡಿಯೊ ಹಂಚಿಕೊಂಡಿದದ್ದಾರೆ. ಮಹಿಳೆಯೊಬ್ಬರು ತೊಂದರೆಗೀಡಾದಂತೆ ಕಾಣಿಸಿಕೊಂಡ ಹಿನ್ನೆಲೆ, ಅವರಿಗೆ ಸಾಮಾನ್ಯವಾಗಿ ಕಾರು, ಬೈಕ್​ ಇರುವವರು ಲಿಫ್ಟ್​ ಕೊಡುತ್ತಾರೆ. ಮಹಿಳೆಯರು ಲಿಫ್ಟ್ ಕೊಡುವವರ ಬಳಿ ಮಾತನಾಡಿಕೊಂಡು ವ್ಯಕ್ತಿಗಳ ವಿಶ್ವಾಸಗಳಿಸುತ್ತಾರೆ. ಬಳಿಕ ಅವರ ನಿಜವಾದ ಮುಖ ಬಯಲಾಗುತ್ತದೆ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ.

ವೈರಲ್ ವಿಡಿಯೋದಲ್ಲೇನಿದೆ?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ಕ್ಲಿಪ್, ಅಂತಹ ಒಂದು ಘಟನೆಯನ್ನು ಸೆರೆಹಿಡಿಯುತ್ತದೆ. ಬೈಕರ್ ಜೊತೆ ಲಿಫ್ಟ್​ ಕೇಳಿ ಸವಾರಿ ಮಾಡುತ್ತಿದ್ದ ಮಹಿಳೆಯನ್ನು ಕೆಲ ವ್ಯಕ್ತಿಗಳ ಕಾರಿನಲ್ಲಿ ಕುಳಿತುಕೊಂಡು ವಿಡಿಯೋ ರೆಕಾರ್ಡ್​ ಮಾಡುತ್ತಿದ್ದಾರೆ.

ಬೈಕ್​ನ ವ್ಯಕ್ತಿಯ ಜತೆಗೆ ಮಾತನಾಡುತ್ತಿ ಕೂತಿದ್ದ ಆಕೆಯನ್ನು ವಿಡಿಯೋದಲ್ಲಿ ತೋರಿಸಿ, ನೋಡಿ, ಈ ಮಹಿಳೆ ಜನರಿಂದ ಲಿಫ್ಟ್ ಕೇಳಿ ನಂತರ ಅವರಿಂದ ನಗದು, ಬಂಗಾರ, ಮೊಬೈಲ್ ಕದಿಯುತ್ತಾಳೆ ಎಂದು ಹೇಳುವ ದೃಶ್ಯಗಳು ಸೆರೆಯಾಗಿವೆ. ತಾನು ಸಿಕ್ಕಿಬಿದ್ದಿರುವುದನ್ನು ಅರಿತುಕೊಂಡ ಮಹಿಳೆ ಬೇಗನೆ ಮುಖವನ್ನು ಬಿಳಿ ಬಟ್ಟೆಯಿಂದ ಮುಚ್ಚಿಕೊಂಡು ಬೈಕ್‌ನಿಂದ ಇಳಿದಳು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net