'ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ'; ಸೋಷಿಯಲ್ ಮಿಡಿಯಾದಲ್ಲಿ ಹೊಸ ಅಭಿಯಾನ ಪ್ರಾರಂಭ

Badavara Makkalu
Published on

ಬೆಂಗಳೂರು: ಅತ್ತ 'ಹೆಡ್​ ಬುಷ್​' ವಿವಾದ ತಾರಕಕ್ಕೇರುತ್ತಿದ್ದಂತೆಯೇ, ಇತ್ತ ಸೋಷಿಯಲ್​ ಮೀಡಿಯಾದ 'ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ ...' ಎಂಬ ಹೊಸ ಅಭಿಯಾನವೊಂದು ಸೋಷಿಯಲ್ ಮಿಡಿಯಾದಲ್ಲಿ ಪ್ರಾರಂಭವಾಗಿದೆ. ಈ ಮೂಲಕ ಆ ಚಿತ್ರದ ನಾಯಕ ಧನಂಜಯ್​ಗೆ ಸಾಥ್​ ನೀಡಲಾಗುತ್ತಿದೆ.

'ಹೆಡ್​ ಬುಷ್​' ಚಿತ್ರದಲ್ಲಿ ದೈವದ ಬಗ್ಗೆ ಹಗುರವಾದ ಪದಗಳ ಬಳಕೆ ಮಾಡುವುದರ ಜತೆಗೆ ಸಂಪ್ರದಾಯ ಬದ್ಧ ದೈವ ಆಚರಣೆಯನ್ನ ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂಬ ಆಕ್ಷೇಪಗಳು ಚಿತ್ರದ ಕುರಿತು ಕೇಳಿಬರುತ್ತಿದೆ. ಈ ಕುರಿತು ಆ ಸಮುದಾಯದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನೂ ನೀಡಿದ್ದಾರೆ. ಇನ್ನೊಂದು ಕಡೆ ಚಿತ್ರತಂಡದವರು ವೀರಗಾಸೆ ನೃತ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಎಲ್ಲ ವಿವಾದಗಳಿಂದ ಚಿತ್ರದ ಗಳಿಕೆ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಸೋಷಿಯಲ್​ ಮೀಡಿಯಾದಲ್ಲಿ 'ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ ...' ಎಂಬ ಹೊಸ ಅಭಿಯಾನವೊಂದು ಪ್ರಾರಂಭವಾಗಿದೆ. ಧನಂಜಯ ಮೇಲಿನ ಅಭಿಮಾನದಿಂದ ಅಭಿಮಾನಿಗಳು ಟಿಕೆಟ್​ ಬುಕ್​ ಮಾಡಲು ಮುಂದಾಗುತ್ತಿದ್ದಾರೆ.

ಅಭಿಮಾನಿಗಳು ಒಬ್ಬರಿಂದ ಒಬ್ವರು ಸ್ಫೂರ್ತಿಗೊಂಡು 'ಹೆಡ್ ಬುಷ್' ಚಿತ್ರದ ಟಿಕೆಟ್​ಗಳನ್ನು ಬುಕ್​ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಯೊಬ್ಬರು ದೂರದ ಅಮೆರಿಕದಿಂದ ಬುಕ್​ ಮೈ ಶೋ ಮೂಲಕ ಬೆಂಗಳೂರಿನಲ್ಲಿ ಟಿಕೆಟ್​ ಬುಕ್​ ಮಾಡಿಸಿ, ತಮ್ಮ ಆಪ್ತರನ್ನು ಚಿತ್ರಕ್ಕೆ ಕಳಿಸಿದ್ದೂ ಇದೆ. ಈ ಮೂಲಕ ಬಾಕ್ಸ್​ಆಫೀಸ್​ನಲ್ಲಿ ಚಿತ್ರ ಸೋಲದಂತೆ ನೋಡಿಕೊಳ್ಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net