

ಮೈಸೂರು: ಮೂವರು ವಕೀಲರು ಪ್ರಯಾಣಿಸುತ್ತಿದ್ದ ಕಾರು ನಾಲೆಗೆ ಪಲ್ಟಿಯಾದ ಘಟನೆ ಮೈಸೂರು ಜಿಲ್ಲೆಯ ಸರಗೂರಿನ ಸಾಗರೆ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಸ್ಥಳೀಯರ ಸಹಾಯದಿಂದ ಓರ್ವ ವಕೀಲ ನೀರಿನಿಂದ ಮೇಲಕ್ಕೆ ಹೊರ ಬಂದಿದ್ದಾರೆ. ನಾಲೆಯ ನೀರಿನಲ್ಲಿ ತೇಲಿ ಹೋದ ಮತ್ತಿಬ್ಬರ ಪತ್ತೆಆಗಿ ಶೋಧಕಾರ್ಯ ಮುಂದುವರಿದಿದೆ.
ವಕೀಲರಾದ ಅಶೋಕ್, ದಿನೇಶ್ ಮತ್ತು ಗಿರೀಶ್ ಎಂಬುವವರು ಕಬಿನಿ ಡ್ಯಾಂ ವೀಕ್ಷಣೆ ಮಾಡಿ ಕಾರಿನಲ್ಲಿ ವಾಪಸ್ ಆಗುತ್ತಿದ್ದರು. ಮಾರ್ಗಮಧ್ಯೆ ಸಾಗರೆ ಗ್ರಾಮದ ಬಳಿ ಸೇತುವೆಗೆ ಡಿಕ್ಕಿಯಾಗಿ ನಾಲೆಗೆ ಕಾರು ಬಿದ್ದಿದೆ.
ಸ್ಥಳೀಯರು ಎಸೆದ ಹಗ್ಗದ ಸಹಾಯದಿಂದ ಅಶೋಕ್ ಮೇಲಕ್ಕೆ ಬಂದಿದ್ದಾರೆ. ದಿನೇಶ್ ಮತ್ತು ಗಿರೀಶ್ಗಾಗಿ ಶೋಧಕಾರ್ಯ ನಡೆಯುತ್ತಿದೆ.