2ನೇ ಬಾರಿಯೂ UPSC ಪರೀಕ್ಷೆಯಲ್ಲಿ ಪಾಸ್​ ಆದ ಮೈಸೂರಿನ ಮೇಘನಾ! ದೃಷ್ಟಿ ಸಮಸ್ಯೆಯನ್ನೇ ಮೆಟ್ಟಿನಿಂತ ಸಾಧಕಿ

upsc toper meghana
Published on

ಮೈಸೂರು: ಮನಸ್ಸಿದ್ದರೆ ಮಾರ್ಗ, ಛಲ ಹಿಡಿದು ಸಾಗಿದರೆ ಗುರಿ ಮುಟ್ಟೋದು ಗ್ಯಾರಂಟಿ, ಸತತ ಪ್ರಯತ್ನ ಇದ್ದಲ್ಲಿ ಸಾಧನೆ ಕಟ್ಟಿಟ್ಟ ಬುತ್ತಿ... ಎಂಬ ಮಾತು ಅಕ್ಷರಶಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೆ.ಟಿ. ಮೇಘನಾ ಅವರಿಗೆ ಅನ್ವಯಿಸುತ್ತೆ. 2021ನೇ ಸಾಲಿನ UPSC ಪರೀಕ್ಷೆಯಲ್ಲಿ ಮೇಘನಾ 425ನೇ ರ‍್ಯಾಂಕ್​ ಪಡೆಸು ಸ್ಪೂರ್ತಿಯ ಚಿಲುಮೆ ಆಗಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿರುವ ಮೇಘನಾ ಅವರು ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಮೂಲದವರು. ತಾಂಡವಮೂರ್ತಿ ಮತ್ತು ನವನೀತ ದಂಪತಿ ಪುತ್ರಿಯಾದ ಮೇಘನಾ ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ.

10ನೇ ತರಗತಿ ವಿದ್ಯಾರ್ಥಿಯಾಗ ಮೇಘನಾಗೆ ರೆಟಿನಾ ಸಮಸ್ಯೆ ಎದುರಾಗಿ, ಶೇ.70 ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ತಮಗಿರುವ ಈ ವೈಕಲ್ಯವನ್ನು ಮೆಟ್ಟಿನಿಂತು ಯುಪಿಎಸ್​‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.

2020ನೇ ಸಾಲಿನಲ್ಲೂ ಯುಪಿಎಸ್​ಸಿ ಪರೀಕ್ಷೆ ಎದುರಿಸಿದ್ದ ಮೇಘನಾ, 465ನೇ ರ‍್ಯಾಂಕ್ ಪಡೆದಿದ್ದರು. ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದ ಮೇಘನಾ, 2015ನೇ ಬ್ಯಾಚ್​ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ ರ‍್ಯಾಂಕ್ ಪಡೆದಿದ್ದರು. ಸದ್ಯ ಬೆಂಗಳೂರಿನಲ್ಲಿ ಖಜಾನೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳ ಸಾಧನೆ ಕಂಡು ಪೋಷಕರು ಮತ್ತು ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net