More

    UPSC ರಿಸಲ್ಟ್​ ಪ್ರಕಟ: ದೇಶಕ್ಕೆ ಶ್ರುತಿ ಶರ್ಮಾ ಟಾಪರ್​, ದಾವಣಗೆರೆಯ ಅವಿನಾಶ್​ಗೆ 31ನೇ ರ‌್ಯಾಂಕ್

    ನವದೆಹಲಿ: ದೆಹಲಿ: 2021ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ(UPSC)ಯ ಫಲಿತಾಂಶ ಪ್ರಕಟವಾಗಿದ್ದು, ಶ್ರುತಿ ಶರ್ಮಾ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.

    ಅಂಕಿತಾ ಅಗರ್ವಾಲ್ ಮತ್ತು ಗಾಮಿನಿ ಸಿಂಗ್ಲಾ ಕ್ರಮವಾಗಿ ಎರಡು ಮತ್ತು ಮೂರನೇ ರ್ಯಾಂಕ್ ಪಡೆದಿದ್ದಾರೆ. ದಾವಣಗೆರೆಯ ಅವಿನಾಶ್ 31ನೇ ರ‌್ಯಾಂಕ್ ಪಡೆದಿದ್ದು, ಕರ್ನಾಟಕಕ್ಕೆ ಇವರೇ ಟಾಪರ್​. ಉತ್ತರ ಪ್ರದೇಶದ ಬಿಜ್ನೋರ್ ಮೂಲದ ಶ್ರುತಿ ಶರ್ಮಾ, ದೆಹಲಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.

    ಮುಖ್ಯ ಪರೀಕ್ಷೆಯ ಫಲಿತಾಂಶ 2022ರ ಮಾರ್ಚ್ 17ರಂದು ಪ್ರಕಟವಾಗಿತ್ತು. ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ ಏ.5ರಿಂದ ಮೇ 26ರವರೆಗೆ ನಡೆದಿತ್ತು. ಒಟ್ಟು 685 ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, ಇವರಲ್ಲಿ 244 ಸಾಮಾನ್ಯ, 73 EWS, 203 OBC, 105 SC ಮತ್ತು 60 ST ವರ್ಗದ ಅಭ್ಯರ್ಥಿಗಳು ಸೇರಿದ್ದಾರೆ.UPSCಯ ಅಧಿಕೃತ ಸೈಟ್ upsc.gov.in ನಲ್ಲಿ ಫಲಿತಾಂಶ ನೋಡಬಹುದು.

    ಯುಪಿಎಸ್​ಸಿ ಪರೀಕ್ಷೆಯಲ್ಲಿ ಟಾಪ್​ 10 ರ‌್ಯಾಂಕ್ ಬಂದವರ ಲಿಸ್ಟ್
    1. ಶ್ರುತಿ ಶರ್ಮಾ
    2. ಅಂಕಿತಾ ಅಗರ್ವಾಲ್
    3. ಗಾಮಿನಿ ಸಿಂಘಾಲ್
    4. ಐಶ್ವರ್ಯ ವರ್ಮಾ
    5. ಉತ್ಕರ್ಷ್ ದ್ವಿವೇದಿ
    6. ಯಕ್ಷ್ ಚೌಧರಿ
    7. ಸಮ್ಯಕ್ ಜೈನ್
    8. ಇಶಿತಾ ರಾಠಿ
    9. ಪ್ರೀತಮ್ ಕುಮಾರ್
    10. ಹರ್ಕೀರತ್ ಸಿಂಗ್ ರಾಂಧವ

    ಇಳಿಕೆ ಕಂಡ ಕರ್ನಾಟಕದ ಪಾಲು
    ಕಳೆದ ವರ್ಷ ಕರ್ನಾಟಕದಿಂದ 30 ಅಭ್ಯರ್ಥಿಗಳು ಆಯ್ಕೆಯಾಗಿದ್ದರು, ಅದರ ಹಿಂದಿನ ವರ್ಷ 27 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಈ ವರ್ಷ ಕರ್ನಾಟಕ ಪಾಲು ಕಡಿಮೆಯಾಗಿದ್ದು, 25 ಅಭ್ಯರ್ಥಿಗಳು ಮಾತ್ರ ರ‍್ಯಾಂಕ್ ಪಡೆದಿದ್ದಾರೆ.

    ಆಯ್ಕೆಯಾದ ಕರ್ನಾಟಕದ ಅಭ್ಯರ್ಥಿಗಳು
    * ಅವಿನಾಶ್​ -31ನೇ ರ‍್ಯಾಂಕ್
    * ಬೆನಕ ಪ್ರಸಾದ್​ ಎನ್​.ಜೆ.- 92ನೇ ರ‍್ಯಾಂಕ್
    * ಮೆಲ್ವನ್​ ವರ್ಗೀಸ್​ -118ನೇ ರ‍್ಯಾಂಕ್
    * ನಿಖಿಲ್​ ಬಸವರಾಜ್​ ಪಾಟಿಲ್​- 139ನೇ ರ‍್ಯಾಂಕ್
    * ವಿಜಯ್​ ಕುಮಾರ್​ ಗಡ್ಗೆ- 151ನೇ ರ‍್ಯಾಂಕ್
    * ಚಿತ್ರರಂಜನ್​ ಎಸ್.​- 155ನೇ ರ‍್ಯಾಂಕ್
    * ಅಪೂರ್ವ ಬಸೂರ್​- 191ನೇ ರ‍್ಯಾಂಕ್
    * ಮನೋಜ್​ ಆರ್​ ಹೆಗಡೆ- 213ನೇ ರ‍್ಯಾಂಕ್
    * ಮಂಜುನಾಥ್​ ಆರ್​.- 219ನೇ ರ‍್ಯಾಂಕ್
    * ರಾಜೇಶ್​ ಪೊನ್ನಪ್ಪ ಎಂ.ಪಿ.- 222ನೇ ರ‍್ಯಾಂಕ್
    * ಕಲ್ಪಶ್ರೀ ಕೆ.ಆರ್.​- 291ನೇ ರ‍್ಯಾಂಕ್
    * ಅರುಣಾ ಎಂ.- 308ನೇ ರ‍್ಯಾಂಕ್
    * ಹರ್ಷವರ್ಧಜ್​ ಬಿ.ಜೆ.- 318ನೇ ರ‍್ಯಾಂಕ್
    * ಗಜಾನನ ಬಾಳೆ- 319ನೇ ರ‍್ಯಾಂಕ್
    * ವಿನಯ್​ ಕುಮಾರ್​ ಡಿ.ಎಚ್.- 352ನೇ ರ‍್ಯಾಂಕ್
    * ಎಂಡಿ ಕುಮುರುದ್ದೀನ್​ ಖಾನ್​ – 414ನೇ ರ‍್ಯಾಂಕ್
    * ಮೇನಾ ಕೆ.ಟಿ. – 425ನೇ ರ‍್ಯಾಂಕ್
    * ರವಿನಂದನ್​ ಬಿ.ಎಂ.- 455ನೇ ರ‍್ಯಾಂಕ್
    * ಸವಿತಾ ಗೊಟ್ಯಾಲ್- 479ನೇ ರ‍್ಯಾಂಕ್
    * ಮಹಮ್ಮದ್​ ಸಿದ್ದಕಿ ಶರೀಫ್​-516ನೇ ರ‍್ಯಾಂಕ್
    * ಚೇತನ್​ ಕೆ.- 532ನೇ ರ‍್ಯಾಂಕ್
    * ನಗರ್​ಗೊಜೆ ಶುಭಂ ಭೌಸಹೆಬ್​ -568ನೇ ರ‍್ಯಾಂಕ್
    * ಪ್ರಶಾಂತ್​ ಕುಮಾರ್​ ಬಿ.ಒ.- 641ನೇ ರ‍್ಯಾಂಕ್
    * ರಾಘವೇಂದ್ರ ಎನ್​.- 649ನೇ ರ‍್ಯಾಂಕ್
    * ಸುಚಿನ್​ ಕೆ.ವಿ.- 682ನೇ ರ‍್ಯಾಂಕ್

    ಮೊದಲ ಪ್ರಯತ್ನದಲ್ಲೇ UPSCಯಲ್ಲಿ 31ನೇ ರ‍್ಯಾಂಕ್ ಪಡೆದ ಕನ್ನಡಿಗ! ಸಾಧನೆ ಬಗ್ಗೆ ಅವಿನಾಶ್​ ಹೇಳಿದ್ದಿಷ್ಟು…

    PSI ಪರೀಕ್ಷೆಯಲ್ಲಿ ಅಕ್ರಮ: ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಶಾಂತಿಬಾಯಿ ಕೊನೆಗೂ ಅರೆಸ್ಟ್​! ಗಂಡನೂ ಸಿಕ್ಕಿಬಿದ್ದ

    ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ ವಿರುದ್ಧ ರಣತಂತ್ರ ಹೆಣೆದ ಕಾಂಗ್ರೆಸ್​! ಇಲ್ಲಿದೆ ಕೈ ನಾಯಕರ ಲೆಕ್ಕಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts