More

    ರಣವೀರ್​ ನಾಚಿಕೆ ಇಲ್ಲದವ, ಪ್ಯಾಂಟ್​ ಧರಿಸದೆ ನನ್ನ ಪಕ್ಕದಲ್ಲಿ ಕೂರುತ್ತಿದ್ದ: ಪರಿಣೀತಿ ಚೋಪ್ರಾ

    ಮುಂಬೈ: ಬಾಲಿವುಡ್​ನಲ್ಲಿ ತಮ್ಮ ವಿಚಿತ್ರ ವರ್ತನೆಯಿಂದಲೇ ಹೆಸರುವಾಸಿಯಾಗಿರುವ ನಟ ರಣವೀರ್ ಸಿಂಗ್​ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬಾಲಿವುಡ್​ನ ಖ್ಯಾತ ನಟಿ ಪರಿಣೀತಿ ಚೋಪ್ರಾ ರಣವೀರ್​ ವಿರುದ್ಧ ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

    ಲೇಡೀಸ್ ವರ್ಸಸ್ ರಿಕಿ ಬೇಲ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ರಣವೀರ್ ಹಾಗೂ ಪರಿಣೀತಿ ಜೊತೆಯಾಗಿ ನಟಿಸಿದ್ದು, ಹಳೆಯ ಸಂದರ್ಶನವೊಂದು ಈಗ ವೈರಲ್​ ಆಗಿದೆ.

    ಇದನ್ನೂ ಓದಿ: ಮಳೆಯಿಂದ ಫೈನಲ್​ ಪಂದ್ಯ ರದ್ದಾದರೆ ಯಾರ ಪಾಲಾಗುತ್ತೆ ಟ್ರೋಫಿ; ಹೀಗಿದೆ ಲೆಕ್ಕಾಚಾರ

    ರಣವೀರ್ ಸಿಂಗ್​ ಕ್ಯಾಮರಾ ಮುಂದೆ ಮಾತ್ರವಲ್ಲದೇ, ಕ್ಯಾಮೆರಾ ಇಲ್ಲದಿದ್ದಾಗಲೂ ವಿಚಿತ್ರವಾಗಿ ಆಡುತ್ತಿರುತ್ತಾರೆ. ಅವನ ಕ್ಯಾರಾವ್ಯಾನ್​ಗೆ ಹೋದರೆ ಆತ ಪ್ಯಾಂಟ್ ಹಾಕಿಕೊಳ್ಳದೆ ಅಂಡರ್​ವೇರ್​ನಲ್ಲೇ ಕೂತಿರುತ್ತಿದ್ದ. ನಾನು ಕ್ಯಾರಾವ್ಯಾನ್​ಗೆ ಹೋದರೆ ಹಾಗೆಯೇ ನನ್ನ ಪಕ್ಕ ಬಂದು ಕುಳಿತುಕೊಳ್ಳುತ್ತಿದ್ದ ನನಗೆ ಬಹಳ ಮುಜುಗರ ಆಗುತ್ತಿತ್ತು, ಆದರೆ ರಣವೀರ್​ಗೆ ಅದು ಏನು ಅನಿಸುತ್ತಿರಲಿಲ್ಲ. ಆತ ಆರಾಮವಾಗಿ ಇರುತ್ತಿದ್ದ. ಅವನಿಗೆ ನಾಚಿಕೆ, ಮುಜುಗರ ಏನೂ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ನಾನು ಯಾರದ್ದಾದರೂ ಕ್ಯಾರಾವ್ಯಾನ್ ಅಥವಾ ಮೇಕಪ್ ರೂಂಗೆ ಹೋಗಬೇಕೆಂದರೆ ಬಾಗಿಲು ತಟ್ಟಿ ಹೋಗುತ್ತೇನೆ. ಆದರೆ ರಣವೀರ್​ ಸಿಂಗ್​ ಕ್ಯಾರಾವ್ಯಾನ್​ಗೆ ಹೋಗಬೇಕೆಂದರೆ ಅದರ ಅವಶ್ಯಕತೆ ಇರುವುದಿಲ್ಲ. ಒಂದೋ ಅವನು ನಿದ್ದೆ ಮಾಡುತ್ತಿರುತ್ತಾನೆ.  ಆದರೆ ಅವನ ಕ್ಯಾರಾವ್ಯಾನ್​ಗೆ ಹೋಗಲು ಇರುವ ದೊಡ್ಡ ಅಡ್ಡಿಯೆಂದರೆ ಆತ ಬಟ್ಟೆ ಹಾಕಿದ್ದಾನೆಯೋ ಇಲ್ಲವೋ ಎಂಬ ಅನುಮಾನ ಇರುತ್ತದೆ. ಕ್ಯಾರಾವ್ಯಾನ್ ಒಳಗೆ ಹೋದ ಕೆಲವರು ಬಟ್ಟೆ ಇಲ್ಲದ ರಣವೀರ್​ ಸಿಂಗ್​ನನ್ನು ಅನೇಕ ಬಾರಿ ನೋಡಿದ್ದಾರೆ ಎಂದು ನಟಿ ಪರಿಣೀತಿ ಚೋಪ್ರಾ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts