More

    ಡೋಜ್​ ಮೆಮೆಗೆ ಸ್ಫೂರ್ತಿಯಾಗಿದ್ದ ಜಪಾನಿನ ಶ್ವಾನ ಕಬೋಸು ಇನ್ನಿಲ್ಲ

    ನವದೆಹಲಿ: ಡೋಜ್​ ಮೆಮೆಗೆ ಹೆಸರುವಾಸಿಯಾಗಿದ್ದ ಜಪಾನ್​ ಮೂಲದ ಶ್ವಾನ ಕಬೋಸು ಮೇ 24ರಂದು ಮೃತಪಟ್ಟಿರುವುದಾಗಿ ಅದರ ಮಾಲೀಕರು ತಿಳಿಸಿದ್ದಾರೆ. ಕಬೋಸುಗೆ 19 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

    ಒಂದು ಕಾಲದಲ್ಲಿ ಕಬೋಸು ನಾಯಿಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಇದರ ಮುಖವನ್ನು ಬಳಸಿಕೊಂಡು ಹಲವು ಮೀಮ್​ಗಳನ್ನು ಮಾಡಲಾಗಿತ್ತು. ಇದೀಗ ಕಬೋಸು ನಿಧನ ವಾರ್ತೆ ಕೇಳಿ ಹಲವರು ಅಘಾತಕ್ಕೆ ಒಳಗಾಗಿದ್ದು, ಸಂತಾಪ ಸೂಚಿಸಿದ್ದಾರೆ.

    ಇದನ್ನೂ ಓದಿ: ಮಹಿಳೆಯರಂತೆ ಮಾತನಾಡಿ ಏಳಕ್ಕೂ ಹೆಚ್ಚು ಅಪ್ರಾಪ್ತ ವಯಸ್ಕರಿಗೆ ಲೈಂಗಿಕ ದೌರ್ಜನ್ಯ; ಆರೋಪಿ ಸಿಕ್ಕಿಬಿದ್ದಿದ್ದೇ ರಣರೋಚಕ

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಬೋಸು ಮಾಲೀಕರು, ನಾನು ಕಬೋಸುಳನ್ನು ಮುದ್ದಿಸುತ್ತಿದ್ದೆ. ಅವಳು ನಿದ್ರಿಸುತ್ತಿರುವಂತೆ ನನಗೆ ಅನಿಸಿತ್ತು. ಆದರೆ, ಅವಳು ಸದ್ದಿಲ್ಲದೆ ಸತ್ತುಹೋಗಿದ್ದಳು. ಡಾಜ್​” ಮೇಮ್ ಮೂಲಕ ಆಕೆ ಜನಪ್ರಿಯಳಾಗಿದ್ದಳು. ಆಕೆ ವಿಶ್ವದ ಅತ್ಯಂತ ಸಂತೋಷದ ನಾಯಿ ಎಂದು ನಾನು ಭಾವಿಸುತ್ತೇನೆ. ಮತ್ತು ನಾನು ಆ ಸಂತೋಷದ ಮಾಲೀಕಳಾಗಿದ್ದೆ ಎಂಬುದು ಹೆಮ್ಮೆಯ ಸಂಗತಿ ಎಂದು ಕಬೋಸು ಮಾಲಕಿ ಸಾಟೊ ಬರೆದುಕೊಂಡಿದ್ದಾರೆ.

    ಶಿಬಾ ಇನು ಜಾತಿಯ ನಾಯಿಯಾದ ಕಬೋಸು 19 ವರ್ಷ ಬದುಕಿದ್ದಳು. ಇದು ಈ ಜಾತಿಯ ನಾಯಿಯ ಸರಾಸರಿ ಜೀವಿತಾವಧಿಯನ್ನು ಮೀರಿದೆ. ಆಕೆಯ ಜನ್ಮದಿನವನ್ನು ನವೆಂಬರ್‌ನಲ್ಲಿ ಆಚರಿಸಲಾಗುತ್ತದೆ. ಮೇ 26ರಂದು ಅವಳಿಗೆ ವಿದಾಯ ಪಾರ್ಟಿ ನಡೆಯಲಿದೆ ಎಂದು ಆ ನಾಯಿಯ ಮಾಲೀಕರು ತಿಳಿಸಿದ್ದಾರೆ. ಕಬೋಸು ನಿಧನಕ್ಕೆ ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಸೇರಿದಂತೆ ಅನೇಕರು ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts